ಖಾತೆ ಬದಲಾವಣೆ ಬಗ್ಗೆ ಸುಳಿವು ಕೊಟ್ಟ ಜೆಡಿಎಸ್ ನಾಯಕ ಜಿ.ಟಿ. ದೇವೇಗೌಡ್ರು..!!
ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ರಚನೆ ಮಾಡಿದ ಬಳಿಕ ಉನ್ನತ ಶಿಕ್ಷಣ ಖಾತೆ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಎರಡು ಮೂರು ದಿನದಲ್ಲಿ ಸಚಿವರ ಖಾತೆ ಬದಲಾವಣೆಯಾಗುವ ಸಾಧ್ಯತೆ ಇದೆ.
ಜಿ.ಟಿ.ದೇವೇಗೌಡ ಅವರು 8ನೇ ತರಗತಿ ವ್ಯಾಸಂಗ ಮಾಡಿದ್ದಾರೆ. ಪದವಿಯನ್ನು ಪಡೆಯದವರಿಗೆ ಉನ್ನತ ಶಿಕ್ಷಣ ಖಾತೆಯ ಹೊಣೆಯನ್ನು ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಭೇಟಿಯ ಬಳಿಕ ಮಾತನಾಡಿದ ಅವರು, 'ಜನರಿಗೆ ಹತ್ತಿರವಿರುವ ಖಾತೆ ನೀಡುವಂತೆ ಕೇಳಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಅವರು ಒಪ್ಪಿಗೆ ನೀಡಿದ್ದಾರೆ' ಎಂದರು. ಇನ್ನು ಎರಡು ಅಥವ ಮೂರು ದಿನದಲ್ಲಿ ಖಾತೆ ಬದಲಾವಣೆ ಆಗಲಿದೆ. ಕುಮಾರಸ್ವಾಮಿ ಅವರು ಸಹ ಖಾತೆ ಬದಲಾವಣೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
Comments