ಬೆಂಗಳೂರು ಪದವೀಧರ ಕ್ಷೇತ್ರ- ಚುನಾವಣೆ 2018, ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ ಜಯ
ಬೆಂಗಳೂರು ನಗರ, ಬೆಂ.ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ಸೇರಿದಂತೆ ಇಂದು ನಡೆದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ. ಬಿಜೆಪಿ ಪಕ್ಷದಿಂದ ಎ.ದೇವೇಗೌಡ, ಕಾಂಗ್ರೆಸ್ ಪಕ್ಷದಿಂದ ರಾಮೋಜಿ ಗೌಡ, ಜೆಡಿಎಸ್ ಪಕ್ಷದಿಂದ ಅಚ್ಚೇಗೌಡ ಶಿವಣ್ಣ ಸೇರಿದಂತೆ 17ಮಂದಿ ಪಕ್ಷೇತರರೂ ಸೇರಿ 22 ಮಂದಿ ಚುನಾವಣಾ ಕಣದಲ್ಲಿದ್ದರು. ತೀವ್ರ ಪೈಪೋಟಿ ಇದ್ದ ಈ ಕ್ಷೇತ್ರದಲ್ಲಿ ಬಿಜೆಪಿಯ ದೇವೇಗೌಡರು ಗೆಲುವಿನ ನಗೆ ಬೀರಿದ್ದಾರೆ. ಮೊದಲ ಸುತ್ತಿನಿಂದಲೇ ಕಾಂಗ್ರೆಸ್ ಪಕ್ಷದ ರಾಮೋಜಿ ಗೌಡರು ಮುಂದಿದ್ದರೂ ಅಂತಿಮವಾಗಿ ಜಯಮಾಲೆ ದೇವೇಗೌಡರ ಪಾಲಾಯಿತು, ತಮ್ಮ ಪ್ರತಿಸ್ಪರ್ಧಿ ರಾಮೋಜಿ ಗೌಡರನ್ನು 3,864 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹೆಚ್.ಎಸ್. ಶಿವಶಂಕರ್, ಮಾಜಿ ನಗರಸಭಾ ಅಧ್ಯಕ್ಷ ಮುದ್ದಪ್ಪ, ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಎಂ.ಕೆ.ವತ್ಸಲ ಜಯಗಳಿಸಿದ ದೇವೇಗೌಡರನ್ನು ಅಬಿನಂಧಿಸಿದ್ದಾರೆ.
Comments