Big Breaking : ರೈತರ ಸಾಲ ಮನ್ನಾ ಕುರಿತು ಗುಡ್ ನ್ಯೂಸ್ ಕೊಟ್ರು ಸಿಎಂ ಎಚ್’ಡಿಕೆ..! ಬ್ಲೂಪ್ರಿಂಟ್ ರೆಡಿ..!!
ರೈತರ ಸಾಲ ಮನ್ನಾ ವಿಚಾರದ ಕುರಿತು ಸಾಕಷ್ಟು ಒತ್ತಡಕ್ಕೊಳಗಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಮಾರು 18 ಸಾವಿರ ಕೋಟಿ ರೂ, ಮೊತ್ತದ ಸಾಲ ಮನ್ನಾ ನೀಲಿ ನಕ್ಷೆ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಹೌದು, ಇನ್ನೂ 15 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಬಗ್ಗೆ ನೀಲಿ ನಕ್ಷೆ ತಯಾರಿಸಲಾಗುವುದು ಎಂದು ರೈತರ ಜೊತೆಗಿನ ವಿಶೇಷ ಸಭೆಯಲ್ಲಿ ಘೋಷಿಸಲಾಗಿತ್ತು. ಆದ್ದರಿಂದ ರೈತರ ಸಾಲ ಮನ್ನಾ ಅನಿರ್ವಾಯತೆಗೆ ಕಟ್ಟು ಬಿದ್ದಿರುವ ಸಿಎಂ ಈಗ ಬ್ಲೂ ಪ್ರಿಂಟ್ ಸಿದ್ದಪಡಿಸಿದ್ದಾರೆ ಎನ್ನಲಾಗಿದೆ. ಪೂರ್ಣ ಪ್ರಮಾಣದ ಸಾಲ ಮನ್ನಾ ಮಾಡಲು ಕಷ್ಟವಾದರೂ ಸದ್ಯಕ್ಕೆ ಒಂದು ಹಂತದವರೆಗೆ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
Comments