ಖಾತೆ ಬದಲಾವಣೆ ಬಗ್ಗೆ ಜಿ.ಟಿ.ದೇವೇಗೌಡರು ಹೇಳಿದ್ದೇನು? ಸಿಎಂ ಎಚ್'ಡಿಕೆ ಯ ಮಹತ್ವದ ನಿರ್ಧಾರ…!!
ಸಚಿವ ಸ್ಥಾನ ಹಂಚಿಕೆಯಾದ ಬೆನ್ನಲ್ಲೇ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ಬಗ್ಗೆ ಬಂದಿದ್ದ ಟೀಕೆಗಳ ಬಗ್ಗೆ ಜಿ.ಟಿ.ದೇವೇಗೌಡ ಅವರು ಸಿಎಂ ಎಚ್.ಡಿ. ಕುಮಾರಸ್ವಾಮಿಯೊಂದಿಗೆ ಮಾತುಕತೆ ನಡೆಸಿದ್ದು, ಸಿಎಂ ಕುಮಾರಸ್ವಾಮಿ ಅವರು ಖಾತೆ ಬದಲಾವಣೆ ಮಾಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ನಿನ್ನೆ ಮೈಸೂರಿನಲ್ಲಿ ಜಿ.ಟಿ.ದೇವೇಗೌಡರು ಹಾಗೂ ಪುಟ್ಟರಾಜು ರವರ ಜೊತೆ ಮಾತುಕತೆ ನಡೆಸಿರುವ ಕುಮಾರಸ್ವಾಮಿಯವರು, ಖಾತೆ ಹಂಚಿಕೆಯಲ್ಲಿ ಇದ್ದ ಅಸಮಾಧಾನವನ್ನು ಹೋಗಲಾಡಿಸಿದ್ದಾರೆ. ಭೇಟಿಯ ಸಮಯದಲ್ಲಿ ಉನ್ನತ ಶಿಕ್ಷಣ ಖಾತೆ ಬಹಳ ದೊಡ್ಡದು. ಅದನ್ನು ಬೇರೆಯವರಿಗೆ ನೀಡಿ. ಜನಪರವಾದ ಯಾವುದಾದರೂ ಖಾತೆಯನ್ನು ನೀಡಿ ನಾನು ನಿಭಾಯಿಸುವೆ ಎಂದು ಜಿ.ಟಿ.ದೇವೇಗೌಡರು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಒಪ್ಪಿದ ಕುಮಾರಸ್ವಾಮಿಯವರು, ದೇವೇಗೌಡರ ಬಳಿ ಮಾತನಾಡಿ ಖಾತೆ ಬದಲಾಯಿಸುವುದಾಗಿ ಹೇಳಿದ್ದಾರೆ. ಉನ್ನತ ಶಿಕ್ಷಣ ಖಾತೆಯನ್ನು ಯಾರಾದರೂ ಯಂಗ್ ಸ್ಟರ್ ಗೆ ನೀಡಿದರೆ ಆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎಂದು ಸ್ವತಃ ಜಿ.ಟಿ. ದೇವೇಗೌಡರೇ ಹೇಳುವ ಮೂಲಕ ದೊಡ್ಡತನ ಮೆರೆದಿದ್ದಾರೆ ಎನ್ನಬಹುದು. ಜಿ.ಟಿ.ದೇವೇಗೌಡರಿಗೆ ಸಹಕಾರಿ ಖಾತೆ ಜೊತೆಗೆ ಮೈಸೂರು ಜಿಲ್ಲೆ ಉಸ್ತುವಾರಿ ಖಾತೆಯನ್ನೂ ಕೊಡುವ ಸಾಧ್ಯತೆ ಇದೆ ಎಂದು ಜಿಡಿಎಸ್ ಮೂಲಗಳಿಂದ ಮಾಹಿತಿ ಬಂದಿದೆ. ಬಂಡೇಪ್ಪ ಕಾಶೆಂಪುರ್ ಬಳಿ ಇರುವ ಸಹಕಾರಿ ಖಾತೆಯನ್ನು ಜಿ.ಟಿ.ದೇವೇಗೌಡರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
Comments