ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿಹೊಗಳಿದ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ
ಆಧುನಿಕ ಯುಗದಲ್ಲಿ ದೇವೇಗೌಡರು ಸಮುದಾಯದ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಆದಿಚುಂಚನಗಿರಿ ಸ್ವಾಮೀಜಿಯವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹಾಡಿಹೊಗಳಿದ್ದಾರೆ.
ಕೆಂಪೇಗೌಡ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸುವ ಸಲುವಾಗಿ ಆದಿಚುಂಚನಗಿರಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಇದೆ ವೇಳೆ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ ಅವರು, ರಾಜಕೀಯವನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಧುನಿಕ ಕಾಲದಲ್ಲಿ ನಮ್ಮ ಸಮುದಾಯದ ಕಣ್ಣು ಎಂದು ಹೇಳಿದರು. ಸಾಮಾಜಿಕ ಹರಿಕಾರನಾಗಿ ಕೆಂಪೇಗೌಡ, ಆಧ್ಯಾತ್ಮಿಕ ನೆಲೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ, ಸಾಹಿತ್ಯವಲಯದಲ್ಲಿ ಕುವೆಂಪು ಐಕಾನ್ ಆಗಿದ್ದಾರೆ. ಅವರೆಲ್ಲಾ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅದೇ ರೀತಿ ಆಧುನಿಕ ಯುಗದಲ್ಲಿ ದೇವೇಗೌಡರು ಸಮುದಾಯದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ದೇವೇಗೌಡರ ಹೆಸರು ಹೇಳಿದ ತಕ್ಷಣ ಕೆಲವೊಂದು ಜನ ಮೂಗುಮುರಿಯಲು ಅವಕಾಶವಿದೆ. ಕೆಲಕಾಲ ಜೊತೆಯಲಿದ್ದು, ಅವಕಾಶ ವಂಚಿತರಾಗಿ ಆಚೆಗೆ ಹೋದ ತಕ್ಷಣ ದೇವೇಗೌಡರು ಬೇಕಾಗುತ್ತದೆ. ಬೇಡ ಎಂಬ ಪ್ರಶ್ನೆ ಅಲ್ಲ ಇದು, ರಾಜಕೀಯವನ್ನು ಪಕ್ಕಕ್ಕಿಟ್ಟು ಸಮುದಾಯದ ಮತ್ತು ಸಮಾಜದ ಒಳಿತಿಗೆ ನಿಪ್ಷಕ್ಷಪಾತವಾಗಿ ಶ್ರಮಿಸಿದ ವ್ಯಕ್ತಿಗಳನ್ನು ಗುರಿತಿಸಬೇಕು ಎಂದು ಹೇಳುವ ಮೂಲಕ ಒಳ್ಳೆಯ ಕೆಲಸವನ್ನು ಜಾತ್ಯತೀತವಾಗಿ, ಪಕ್ಷಾತೀತವಾಗಿ ಸ್ವೀಕರಿಸಬೇಕು ಎಂದು ಸಂದೇಶ ನೀಡಿದರು.
Comments