ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ವತಿಯಿಂದ ಪತ್ರಿಕಾಗೋಷ್ಠಿ
ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನಾಚರಣೆ ಕುರಿತಂತೆ ಇಂದು ನಗರದಲ್ಲಿರುವ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಅಂದಿನ ಕಾರ್ಯಕ್ರಮಗಳ ವಿವರಗಳನ್ನು ಟ್ರಸ್ಟ್ ಗೌರವ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಯವರು ತಿಳಿಸಿದರು, ಅಧ್ಯಕ್ಷರಾದ ಶ್ರೀ ಕೆ.ಎಂ.ಹನುಮಂತರಾಯಪ್ಪನವರು ಮಾತನಾಡುತ್ತಾ ಯೋಗ ದಿನಾಚರಣೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಕೋರಿದರು, ಇದಕ್ಕೆ ಪೂರ್ವಭಾವಿಯಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವಾರಗಳ ಕಾಲ ವಿಶ್ವ ಯೋಗ ದಿನಾಚರಣೆಗೆ ಸಂಭಂದ ಪಟ್ಟಂತೆ ದಿನಾಂಕ 11-06-2018 ರಿಂದ 18-06-2018 ರವರೆಗೆ ಬೆಳಿಗ್ಗೆ 5-15 ರಿಂದ 7 ಘಂಟೆಯವರೆಗೆ ಯೋಗ ಶಿಬಿರ ಆಯೋಜಿಸಲಾಗಿದೆ, ಈ ಶಿಬಿರದ ಲಾಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಪಡೆದುಕೊಳ್ಳಲು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಾರ್ಯದರ್ಶಿ ರಮೇಶ್, ಸಿವಿಕ್ ನ್ಯೂಸ್ ಸಿ.ಇ.ಓ ಡಾ.ನಾರಾಯಣ್, ಟ್ರಸ್ಟ್ ಉಪಾಧ್ಯಕ್ಷರಾದ ತ.ನ.ಪ್ರಭುದೇವ್, ಡಾ.ವಿಜಯಕುಮಾರ್. ಪದಾಧಿಕಾರಿಗಳಾದ ಲೋಕೇಶ್ ಮೂರ್ತಿ, ಸೀತಾರಾಂ, ಗಿರೀಶ್, ಶ್ರೀನಿವಾಸ್, ವತ್ಸಲ, ಲೀಲಾ ಮಹೇಶ್, ಕಮಲ, ದಾಕ್ಷಾಯಿಣಿ, ವತ್ಸಲ, ಗಿರಿಜ, ಕವಿತ, ಪ್ರಸನ್ನ ವಿವಿಧ ಯೋಗ ಕೇಂದ್ರಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
Comments