ಜೆಡಿಎಸ್ ನ ಈ ಸಚಿವರಿಗೆ ಫೈನಲ್ ಆದ ಖಾತೆಗಳು..!ಸಿಎಂ ಎಚ್'ಡಿಕೆ ಮಹತ್ವದ ನಿರ್ಧಾರ..!!
ಜೆಡಿಎಸ್ ಪಾಳಯದಲ್ಲಿ ಎಲ್ಲಾ ಸಚಿವರಿಗೂ ಖಾತೆ ಹಂಚಲಾಗಿದೆ. ಬಹುತೇಕ ಎಲ್ಲಾ ಸಚಿವರಿಗೂ ಸಮಾಧಾನವಾಗುವ ಖಾತೆಗಳನ್ನು ನೀಡುವಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ದೇವೇಗೌಡರು ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ನಲ್ಲಿ ಎದ್ದಿರುವ ದೊಡ್ಡಮಟ್ಟದ ಭಿನ್ನಮತ ಜೆಡಿಎಸ್ನಲ್ಲಿ ಕಾಣಿಸುತ್ತಿಲ್ಲ. ಏಕೆಂದ್ರೆ ತಮ್ಮ ಶಾಸಕರನ್ನು ಕುಮಾರಸ್ವಾಮಿ ಭಾವನಾತ್ಮಕವಾಗಿ ಹಿಡಿದಿಟ್ಟುಕೊಂಡಿದ್ದಾರೆ. ಈ ಬಾರಿ ಯಾವುದೇ ಭಿನ್ನಮತ ಇಲ್ಲದೆ 5 ವರ್ಷ ಆಡಳಿತ ಮಾಡಬೇಕು. ಮುಂದೆ ನಾವು ಸ್ವಂತ ಬಲದಿಂದ ಸರ್ಕಾರ ರಚಿಸುವಂತೆ ಜನರ ಮನ ಗೆಲ್ಲ ಬೇಕು. ಆದ್ದರಿಂದ ನೀವು 37 ಜನ ಶಾಸಕರು ನನಗೆ ಆತ್ಮವಿಶ್ವಾಸ ತುಂಬುವಂತೆ ಇರಬೇಕು. ಯಾವುದೇ ಕಾರಣಕ್ಕೂ ಯಾರಿಗೂ ಮೋಸವಾಗದಂತೆ, ಮಂತ್ರಿ ಶಾಸಕ ಎಂಬ ತಾರತಮ್ಯ ಇಲ್ಲದೆ ಕೆಲಸ ಮಾಡುವುದಾಗಿ ಭರವಸೆ ನೀಡಿರುವ ಹಿನ್ನಲೆಯಲ್ಲಿ ಇದೀಗ ಜೆಡಿಎಸ್ನಲ್ಲಿ ಬಹುತೇಕ ಯಾವುದೇ ತಕರಾರು ಇಲ್ಲದೇ ಖಾತೆಗಳ ಹಂಚಿಕೆ ಪೂರ್ಣವಾಗಿದೆ.
ಇಂಧನ ಖಾತೆ ವಿಚಾರದಲ್ಲಿ ಕೊಂಚ ಅಪಸ್ವರಗಳಿದ್ದು, ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಇಮಧನ ಖಾತೆಯನ್ನು ಇಟ್ಟುಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮರಳಿ ಆ ಖಾತೆ ನೀಡಬೇಕು ಎಂಬ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಆ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ನೈತಿಕ ಬೆಂಬಲ ನೀಡಿ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಿ ಸಿದ್ದರಾಮಯ್ಯ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದೇವೇಗೌಡರು ಈ ರೀತಿಯಾದ ತಂತ್ರಗಾರಿಕೆಗೆ ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಎಚ್.ಡಿ.ಕುಮಾರಸ್ವಾಮಿ : ಹಣಕಾಸು , ಇಂಧನ , ಗುಪ್ತಚರ ಖಾತೆ ; ಎಚ್.ಡಿ.ರೇವಣ್ಣ : ಲೋಕೋಪಯೋಗಿ ಖಾತೆ ; ಡಿ.ಸಿ.ತಮ್ಮಣ್ಣ : ಉನ್ನತ ಶಿಕ್ಷಣ ಖಾತೆ ; ಸಾ.ರಾ.ಮಹೇಶ್ : ಸಹಕಾರ ಇಲಾಖೆ ; ಪುಟ್ಟರಾಜು : ಸಾರಿಗೆ ಖಾತೆ ; ವೆಂಕಟರಾವ್ ನಾಡಗೌಡ : ಸಣ್ಣ ನೀರಾವರಿ ಖಾತೆ ; ಎಂ.ಸಿ ಮನುಗುಳಿ : ಸಣ್ಣ ಕೈಗಾರಿಗೆ ಖಾತೆ ; ಗುಬ್ಬಿ ಶ್ರೀನಿವಾಸ್ : ತೋಟಗಾರಿಕೆ ಖಾತೆ ; ಜಿ.ಟಿ.ದೇವೇಗೌಡ : ಕಂದಾಯ ಖಾತೆ ; ಬಂಡಪ್ಪ ಕಾಶೆಂಪುರ : ಅಬಕಾರಿ ಖಾತೆ .
Comments