ದೇವರಹಳ್ಳಿ ಬಳಿಯ ಮುಕುಂದರಾಯಸ್ವಾಮಿ ಬೆಟ್ಟದಲ್ಲಿ ಸೀಡ್ ಬಾಲ್ ಹಾಕಿದ ಕನ್ನಿಕಾ ವಿದ್ಯಾಪೀಠ ಶಾಲೆಯ ಮಕ್ಕಳು

08 Jun 2018 7:13 PM |
825 Report

ಕೊರಟಗೆರೆ ಜೂ. 8:- ಮನುಷ್ಯನ ದುರಾಸೆಯ ಫಲವಾಗಿ ಪ್ರಕೃತಿಯ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದ್ದು ಇದು ನಿಲ್ಲಬೇಕು ಎಂದು ಪಟ್ಟಣ ದ ಕನ್ನಿಕಾ ವಿದ್ಯಾಪೀಠ ಶಾಲೆಯ ಕಾರ್ಯದರ್ಶಿ ಕೆ.ಎಸ್.ವಿ ರಘು ತಿಳಿಸಿದರು.

       ತಾಲೂಕಿನ ದೇವರಹಳ್ಳಿ ಸಮೀಪವಿರುವಂತಹ ಮುಕುಂದಸ್ವಾಮಿ ಬೆಟ್ಟದಲ್ಲಿ ಮಕ್ಕಳ ನೇತೃತ್ವದಲ್ಲಿ ಗುರುವಾರ ಸೀಡ್ ಬಾಲ್ ಗಳನ್ನು ಹಾಕುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆ ಪ್ರಕೃತಿ ತನ್ನಷ್ಟಕ್ಕೇ ತಾನೇ ಸಮಲೋನವನ್ನು ಕಾಯ್ದುಕೊಳ್ಳುತ್ತಿತ್ತು ಆದರೆ ಇಂದು ಮನುಷ್ಯನ ನಿರಂತರ ದಬ್ಬಾಳಿಕೆಯಿಂದ ಅಸಮತೋಲಗೊಳ್ಳುತ್ತಿದ್ದು ಇದನ್ನು ಸರಿದೂಗಿಸಲು ಪ್ರತಿಯೊಬ್ಬರೂ ಜಾಗೃತಿಯನ್ನು ವಹಿಸಬೇಕು... ಮಕ್ಕಳಲ್ಲಿ ಪರಿಸರ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಇಲ್ಲವಾದಲ್ಲಿ ಇದರ ಫಲವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದರು.
         ಸಂಸ್ಥೆಯ ಉಪಾಧ್ಯಕ್ಷ ನಂಜುಂಡ ಶೆಟ್ಟಿ ಮಾತನಾಡಿ ಪರಿಸರದ ಬಗ್ಗೆ ಜ್ಞಾನವನ್ನು ಮಕ್ಕಳಿಗೆ ಶಾಲಾ ಅಂತದಲ್ಲಿ ತಿಳಿಸಬೇಕು, ಪ್ರತಿಯೊಂದು ಮಗುವೂ ಸೀಡ್ ಬಾಲ್ ಹಾಕುವಂತಹ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು ಇಡೀ ತಿಂಗಳಿನಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ಸಂಸ್ಥೆಯ ವತಿಯಿಂದ ಆಯೋಜಿಸುವುದಾಗಿ ತಿಳಿಸಿದರು.
        ಶಾಲೆಯಲ್ಲಿ ಮಕ್ಕಳೇ ಸೀಡ್ ಬಾಲ್ ತಯಾರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳನ್ನು ಹಾಕುವುದುದಲ್ಲದೇ ಇತರೆ ಸಂಘ ಸಂಸ್ಥೆಗಳಿಗೆ ಸೀಡ್ ಬಾಲ್ ನೀಡುವಂತಹ ಯೋಜನೆಯನ್ನು ಶಾಲೆ ಮಾಡಲಿದೆ ಎಂದು ಮುಖ್ಯ ಶಿಕ್ಷಕ ಡಿ.ಎಂ ರಾಘವೇಂದ್ರ ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಭಾರತಿ, ಪವನ್, ಸ್ವಯಂ ಪ್ರೇರಕರಾದ ಜಿ. ಲಕ್ಷ್ಮಿಪ್ರಸಾದ್, ಚಂದನ್, ಲಿಖಿತ್, ಸೇರಿದಂತೆ ಇತರರು ಮಕ್ಕಳೊಂದಿಗೆ ಪಾಲ್ಗೊಂಡು ಸೀಡ್ ಹಾಕಿದರು. ( ಚಿತ್ರ ಇದೆ)

Edited By

Raghavendra D.M

Reported By

Raghavendra D.M

Comments