ಬೆಂಗಳೂರು ಪದವೀಧರ ಕ್ಷೇತ್ರ- ಚುನಾವಣೆ 2018, ಶೇ. 81.96% ಮತದಾನ, ಗೆಲ್ಲುವವರು ಯಾರು?
ಬೆಂಗಳೂರು ನಗರ, ಬೆಂ.ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ಸೇರಿದಂತೆ ಇಂದು ನಡೆದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ 7 ಘಂಟೆಯಿಂದಲೇ ಬಿರುಸಿನಿಂದ ನಡೆಯಿತು. ಬಿಜೆಪಿ ಪಕ್ಷದಿಂದ ಎ.ದೇವೇಗೌಡ, ಕಾಂಗ್ರೆಸ್ ಪಕ್ಷದಿಂದ ರಾಮೋಜಿ ಗೌಡ, ಜೆಡಿಎಸ್ ಪಕ್ಷದಿಂದ ಅಚ್ಚೇಗೌಡ ಶಿವಣ್ಣ ಸೇರಿದಂತೆ 17ಮಂದಿ ಪಕ್ಷೇತರರೂ ಸೇರಿ 22 ಮಂದಿ ಚುನಾವಣಾ ಕಣದಲ್ಲಿದ್ದರು. ಮೂರೂ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಓಲೈಸುತ್ತಾ ತಮ್ಮ ಪಕ್ಷಗಳ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕೇಳಿಕೊಳ್ಳುತ್ತಿದ್ದರು, ತಾಲ್ಲೂಕಿನಾದ್ಯಂತ 2034 ಮತದಾರರಿದ್ದು ಸಂಜೆ ನಾಲ್ಕು ಘಂಟೆ ಹೊತ್ತಿಗೆ 1672 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದರು. 1158 ಮಂದಿ ಪುರುಷರು 504 ಮಂದಿ ಮಹಿಳೆಯರು ಮತದಾನ ಮಾಡಿದ್ದಾರೆ.
Comments