ಉತ್ತಮ ಆಡಳಿತಕ್ಕೆ ಸಿಎಂ ಎಚ್'ಡಿಕೆ ಹೊಸ ಐಡಿಯಾ..!! ಏನ್ ಗೊತ್ತಾ?
ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳಾಗಿ ವಿಭಜನೆ ಹಾಗೂ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಬಿಬಿಎಂಪಿ ಪುನರ್ ರಚನಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಭೆ ನಡೆಸಿದ್ದಾರೆ.
ಬೆಂಗಳೂರು ಬ್ರ್ಯಾಂಡ್ ಗೆ ಸಮಸ್ಯೆ ಉಂಟಾಗದಂತೆ ಬಿಬಿಎಂಪಿ ಆಡಳಿತ ವಿಕೇಂದ್ರೀಕರಣ ಮಾಡುವ ಬಗ್ಗೆ ಸಿಎಂ ಎಚ್‘ಡಿಕೆ ಅವರು ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ನೇತೃತ್ವದ ಸಮಿತಿ ಜೊತೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಲಹೆ ಪಡೆದರು. ಒಂದು ಪಾಲಿಕೆ ಬದಲಾಗಿ ಐದು ಪಾಲಿಕೆಗಳಾಗಿ ವಿಭಜನೆ ಹಾಗೂ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ತರುವುದು ಸೂಕ್ತ. ಬೃಹತ್ ಬೆಂಗಳೂರು ಮಹಾನಗರ ಪ್ರಾಧಿಕಾರ ರಚನೆ ಮಾಡಿ ಐದು ಪಾಲಿಕೆಯನ್ನು ಪ್ರಾಧಿಕಾರದ ಅಡಿ ತರಬೇಕ. ಪ್ರಾಧಿಕಾರಕ್ಕೆ ಸಿಎಂರನ್ನು ಮುಖ್ಯಸ್ಥರನ್ನಾಗಿ ನೇಮಿಸಬೇಕು. ಪ್ರಾಧಿಕಾರ, ಐದು ಪಾಲಿಕಗಳು ಹಾಗೂ ವಾರ್ಡ್ ಮಟ್ಟದ ಸಮಿತಿ ಸೇರಿ ಮೂರು ಹಂತದಲ್ಲಿ ಪಾಲಿಕೆ ಕಾರ್ಯ ನಿರ್ವಹಿಸಬೇಕು. ಇದರಿಂದ ಆಡಳಿತ ವಿಕೇಂದ್ರೀಕರಣ ಉಂಟಾಗಿ ಉತ್ತಮ ಆಡಳಿತ ಸಾಧ್ಯವಾಗುತ್ತದೆ ಎಂದು ತಜ್ಞರು ವಿವರಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Comments