ನಿರುದ್ಯೋಗ ನಿವಾರಣೆಗೆ ಸಿಎಂ ಎಚ್’ಡಿಕೆಯ ಮಾಸ್ಟರ್ ಪ್ಲಾನ್..!

ನಮ್ಮ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣದ ಸಂಖ್ಯೆ ಹೆಚ್ಚಾಗಿದೆ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುವವರಿಗೆ ಅವಕಾಶವನ್ನು ನೀಡುವ ಸಲುವಾಗಿ ವೇದಿಕೆ ಒದಗಿಸಲು ಎಲ್ಲಾ ಸಿದ್ಧತೆಯನ್ನು ನಡೆಸಿದ್ದೇವೆ. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ತಿಂಗಳಲ್ಲಿ ಒಂದು ದಿನ ಮಿನಿ ಉದ್ಯೋಗ ಮೇಳವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಎಚ್’ಡಿಕೆ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಎಚ್’ಡಿಕೆ ಇತ್ತೀಚಿನ ದಿನಗಳಲ್ಲಿ ಯುವಕರು ಉದ್ಯೋಗ ಸಿಗದೆ ಕಷ್ಟ ಪಡುತ್ತಿರುವ ಬಗ್ಗೆ ಸಾಕಷ್ಟು ಮಾಹಿತಿಯೂ ಇದೆ. ಹಾಗಾಗಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವವರಿಗೆ ಅವಕಾಶವನ್ನು ನೀಡುವ ಸಲುವಾಗಿ ವೇದಿಕೆ ಒದಗಿಸಲು ಎಲ್ಲಾ ಸಿದ್ಧತೆಯನ್ನು ನಡೆಸಿದ್ದೇವೆ. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ತಿಂಗಳಲ್ಲಿ ಒಂದು ದಿನ ಮಿನಿ ಉದ್ಯೋಗ ಮೇಳ ನಡೆಸುವ ಉದ್ದೇಶ ಇದೆ ಎಂದು ತಿಳಿಸಿದರು. ಪ್ರತಿನಿತ್ಯ ಮಾಡುವ ಜನತಾ ದರ್ಶನದಲ್ಲಿ ಪ್ರಮುಖವಾಗಿ ಉದ್ಯೋಗ ಸಮಸ್ಯೆ, ಶೈಕ್ಷಣಿಕ ಸಮಸ್ಯೆಗಳು ಸಾಕಷ್ಟು ಇವೆ. ಇದೇ ನಿಟ್ಟಿನಲ್ಲಿ ಅವರಿಗೆಲ್ಲಾ ನೆರವು ನೀಡುವ ಸಂಬಂಧ ಮಿನಿ ಉದ್ಯೋಗ ಮೇಳವನ್ನು ನಡೆಸಲು ತೀರ್ಮಾನಿಸಲಾಗಿದೆ. ಉದ್ಯೋಗ ಮೇಳವನ್ನು ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸುವ ಯೋಚನೆ ಇದೆಯಾದರೂ ಯಾವ ಸ್ಥಳದಲ್ಲಿ ನಡೆಸಿದರೆ ಸೂಕ್ತ ಎಂಬುದರ ಬಗ್ಗೆ ಆಲೋಚನೆಯನ್ನು ನಡೆಸಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
Comments