ಸಿಎಂ ಎಚ್’ಡಿಕೆ ನೇತೃತ್ವದ ಸರ್ಕಾರದಿಂದ ರಾಜ್ಯ ಸರ್ಕಾರಿ ನೌಕರರಿಗೆ ಸಿಕ್ತು ಸಿಹಿಸುದ್ದಿ..!

ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರಿವ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ, ರಾಜ್ಯ ಸರ್ಕಾರಿ ನೌಕರರಿಗೆ ಅನೂಕೂಲವಾಗುವಂತಹ ಒಂದು ಸಿಹಿ ಸುದ್ದಿಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
ಎಸ್.. ಸರ್ಕಾರಿ ನೌಕರರಿಗೆ ವಾರಕ್ಕೆ ಐದು ದಿನ ಮಾತ್ರ ಕಾರ್ಯವನ್ನು ನಿರ್ವಹಿಸುವಂತೆ ಅವಕಾಶ ಮಾಡಿಕೊಡುವುದಕ್ಕೆ ರಾಜ್ಯ ಸರ್ಕಾರ ಹೊಸ ಆದೇಶವನ್ನು ನೀಡಲು ಇದೀಗ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಹೀಗೆ ಶನಿವಾರ ಹಾಗೂ ಭಾನುವಾರ ಕಚೇರಿಗಳಿಗೆ ರಜೆಯನ್ನು ನೀಡಿದರೆ ಅಧಿಕಾರಿಗಳ ವಾಹನದ ಪೆಟ್ರೋಲ್, ಡೀಸೆಲ್ ಉಳಿತಾಯದ ಜೊತೆಗೆ ಕಚೇರಿಗಳ ಹವಾ ನಿಯಂತ್ರಣ ವ್ಯವಸ್ಥೆ ಮತ್ತು ವಿದ್ಯುತ್, ನೀರು ಉಳಿತಾಯವಾಗುವಂತೆ ಎಂಬ ಲೆಕ್ಕಾಚಾರವೂ ಈ ನಿರ್ಧಾರದ ಹಿಂದಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ 5 ದಿನ ಕೆಲಸದ ನಿಯಮವನ್ನು ಜಾರಿಯಾದರೆ ಈಗ ಕೆಲ ನಾಯಕರುಗಳ ಹೆಸರಿನಲ್ಲಿ ಘೋಷಣೆಯನ್ನು ಮಾಡಲಾಗಿರುವ ಜಯಂತಿಯ ದಿನದಂದು ನೀಡಲಾಗುವ ರಜೆಯನ್ನು ರದ್ದು ಮಾಡುವ ಬಗ್ಗೆಯೂ ಕೂಡ ಸಾಕಷ್ಟು ಚರ್ಚೆಗಳನ್ನು ನಡೆಸಿದೆ ಎಂದು ಹೇಳಲಾಗಿದೆ. ಇದಲ್ಲದೇ ಸರ್ಕಾರಿ ಕಚೇರಿಯ ಕೆಲಸದ ಅವಧಿಯನ್ನುನ್ನು ಪ್ರತಿನಿತ್ಯ ಒಂದು ತಾಸು ಅಥಾವ ಎರಡು ತಾಸು ಹೆಚ್ಚಳ ಮಾಡುವುದರ ಬಗ್ಗೆ ಕೂಡ ಪರಿಶೀಲನೆ ಯನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
Comments