ಡಿಕೆಶಿ ಗೆ ಬಿಗ್ ಶಾಕ್ : ಇಂಧನ ಖಾತೆ ಕುರಿತು ಮಹತ್ವದ ಬೆಳವಣಿಗೆ..!ಸಿಎಂ ನಿರ್ಧಾರ ಏನ್ ಗೊತ್ತಾ?
ಹಿಂದಿನ ಸರಕಾರದಲ್ಲಿ ಡಿ.ಕೆ.ಶಿವಕುಮಾರ್ ಗೆ ಇಂಧನ ಖಾತೆ ವಹಿಸಿದ್ದರು. ಕೆಲವು ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ, ವಿದ್ಯುತ್ ಸಮಸ್ಯೆಯಾಗದಂತೆ ನಿರ್ವಹಿಸಿದ್ದನ್ನು ಮುಂದಿಟ್ಟು, ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಮತ್ತೆ ಇಂಧನ ಖಾತೆಯೇ ಬೇಕೆಂದು ಪಟ್ಟು ಹಿಡಿದಿದ್ದರು. ಈ ನಡುವೆ ಇತ್ತ ರೇವಣ್ಣ ಇಂಧನ ಹಾಗೂ ಪಿಡಬ್ಲ್ಯುಡಿ ಎರಡೂ ಖಾತೆ ಬಯಸಿದ್ದರು.
ಇನ್ನು ಒಂದೇ ಖಾತೆಗಾಗಿ ಇಬ್ಬರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿತ್ತು, ಹೀಗಾಗಿ ಖಾತೆಗೆ ಸಂಬಂಧಪಟ್ಟಂತೆ ಇಬ್ಬರ ಮನ ಒಲಿಸುವುದು ಕಷ್ಟವಾಗಿತ್ತು. ಈ ಮಧ್ಯೆ ರೇವಣ್ಣ ಅವರು ಇಂಧನದ ಜೊತೆ ಪಿಡಬ್ಲ್ಯೂಡಿ ಖಾತೆಯನ್ನು ನೀಡುವಂತೆ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಪಟ್ಟು ಹಿಡಿದಿದ್ದರು. ಈ ನಡುವೆ ಡಿಕೆ ಶಿವಕುಮಾರ್ ಅವರಿಗೆ ಇಂಧನ ಖಾತೆಯನ್ನು ಬಿಟ್ಟುಕೊಡಲು ರೇವಣ್ಣ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಇನ್ನು ಮೂಲಗಳ ಮಾಹಿತಿ ಪ್ರಕಾರ ಸದ್ಯ ಎಚ್.ಡಿ ಕುಮಾರಸ್ವಾಮಿ ಅವರೇ ಇಂಧನ ಖಾತೆಯನ್ನು ತಮ್ಮ ಬಳಿಯಲ್ಲಿ ಇಟ್ಟುಕೊಳ್ಳಲಿದ್ದಾರೆ ಎನ್ನಲಾಗಿದೆ. ಇದಲ್ಲದೇ ಇಂಧನ ಖಾತೆಗೆ ನಾವು ನೀವು ನೀಡಿದರೆ ನೀವು ನಮಗೆ ಅದೇ ತೂಕದ ಇನ್ನೊಂದು ಖಾತೆಯನ್ನು ನೀಡಬೇಕು ಅಂತ ಎಚ್.ಡಿ ದೇವೇಗೌಡ್ರು ತಮ್ಮ ಬೇಡಿಕೆಯನ್ನು ಕಾಂಗ್ರೆಸ್ ಅವರ ಬಳಿ ಇಟ್ಟಿದ್ದಾರೆ. ಈ ನಡುವೆ ದೇವೇಗೌಡ್ರು ಇಟ್ಟಿರುವ ಬೇಡಿಕೆ ಇನ್ನೂ ಕಾಂಗ್ರೆಸ್ ನಿಂದ ಯಾವುದೇ ಮಾಹಿತಿ ಬಾರದೇ ಇರುವುದರಿಂದ ಎಚ್.ಡಿ ಕುಮಾರಸ್ವಾಮಿ ಅವರು ಇಂಧನ ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಳ್ಳುವುದಕ್ಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
Comments