ಯಾವುದೇ ಕಾರಣಕ್ಕೂ ಇವರಿಗೆ ಸಚಿವ ಸ್ಥಾನ ಕೊಡಬಾರದು…ಕಾಂಗ್ರೆಸ್ ಹೈಕಮಾಂಡ್ ಗೆ ಖಡಕ್ ಸೂಚನೆ ಕೊಟ್ಟ ದೊಡ್ಡಗೌಡ್ರು..!



ಜೆಡಿಎಸ್ – ಕಾಂಗ್ರೆಸ್ ಸರಕಾರದ ಸಚಿವ ಸಂಪುಟ ರಚನೆಯಾಗಲಿದ್ದು, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ ಗೆ ಖಡಕ್ ಸೂಚನೆಯೊಂದನ್ನು ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೌದು, ಈ ಮೈತ್ರಿ ಕೂಟದ ಸರ್ಕಾರದಲ್ಲಿ ಎರಡೂ ಪಕ್ಷದ ಬಹುತೇಕ ಶಾಸಕರು ಮಂತ್ರಿಗಿರಿ ಪಡೆಯಲು ಭಾರಿ ಲಾಭಿ ನಡೆಸುತ್ತಿದ್ದು ಆದರೆ ಇವರಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಗೆ ಯಾವುದೇ ಕಾರಣಕ್ಕೆ ಮಂತ್ರಿಗಿರಿ ಕೊಡಬಾರದೆಂದು ಕಾಂಗ್ರೆಸ್ ಗೆ ಖಡಕ್ ಸೂಚನೆ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊದಲು ಜೆಡಿಎಸ್ ನಲ್ಲಿದ್ದ ಜಮೀರ್ ಅಹಮದ್ ಕುಮಾರಸ್ವಾಮಿಯ ಬಲಗೈ ಬಂಟರಾಗಿದ್ದರು. 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಂತು ಗೆಲುವನ್ನು ಸಾದಿಸಿದ್ದರು ಕೂಡ. ಇದರೆಲ್ಲದರ ನಡುವೆ ಬಹುಮತವಿಲ್ಲದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮಾತ್ರಿ ಸರ್ಕಾರ ರಚಿಸಿ, ಜೆಡಿಎಸ್ ನ ಕುಮಾರಸ್ವಾಮಿ ಮುಖ್ಯಮಂತ್ರಿ ಪಟ್ಟದಲ್ಲಿದ್ದಾರೆ.
Comments