ಜನತಾದರ್ಶನದಲ್ಲಿ ಮಾನವೀಯತೆ ಮೆರೆದ ಸಿಎಂ ಕುಮಾರಸ್ವಾಮಿ..!

ನೂತನ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಸಿಎಂ ಕುಮಾರಸ್ವಾಮಿಯವರು ಇಂದು ಬೆಳಿಗ್ಗೆ ತಮ್ಮ ಮನೆ ಮುಂದೆ ಜನತಾದರ್ಶನ ಮಾಡಿದ್ದಾರೆ.
ಅಪಘಾತವಾಗಿ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಂತಹ ಕುಟುಂಬಕ್ಕೆ ಆಸ್ಪತ್ರೆ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಡಿಪ್ಲೊಮಾ ಮಾಡಿದ್ರೂ ಕೆಲಸವಿಲ್ಲದೆ ಅಲೆದಾಡುತ್ತಿದ್ದ ಮಹಿಳೆಗೆ ವಿಧಾನಸೌಧದಲ್ಲಿ ಕೆಲಸ ಖಾಲಿ ಇದ್ರೆ ಕೊಡಿ ಅಂತ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತಾಕೀತನ್ನು ಕೂಡ ಮಾಡಿದ್ದಾರೆ. ವಿಧಾನಸೌಧದಲ್ಲಿ ಕೆಲಸ ಇಲ್ಲದೆ ಟೈಮ್ ಪಾಸ್ ಮಾಡುವ ಹಲವು ನೌಕರರು ಇದ್ದಾರೆ. ಕಷ್ಟ ಪಡುವವರಿಗೆ ಕೆಲಸ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
Comments