ನಗರ್ತರಪೇಟೆ ಮರು ಚುನಾವಣೆಗೆ ಜೆಡಿಎಸ್ ನಿಂದ ಭಾಸ್ಕರ್ ನಾಮಪತ್ರ ಸಲ್ಲಿಕೆ





ಜೂನ್ 18ನೇ ತಾರೀಕಿನಂದು ನಡೆಯಲಿರುವ ದೊಡ್ಡಬಳ್ಳಾಪುರ ನಗರದ 22ನೇ ವಾರ್ಡ್ ಮರು ಚುನಾವಣೆಗೆ ಜೆಡಿಎಸ್ ಪಕ್ಷದ ವತಿಯಿಂದ ಎಸ್.ಎ.ಭಾಸ್ಕರ್ ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡರು, ನಗರ ಘಟಕ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ಕಾರ್ಯಾಧ್ಯಕ್ಷ ಪಿ.ಸಿ.ಲಕ್ಷ್ಮಿನಾರಾಯಣ್, ಪ್ರಧಾನ ಕಾರ್ಯದರ್ಶಿ ಅಖಿಲೇಶ್, ತಾಲ್ಲೂಕು ಅಧ್ಯಕ್ಷ ಲಕ್ಷ್ಮೀಪತಿ, ನಗರಸಭಾ ಸದಸ್ಯರಾದ ಶಿವಕುಮಾರ್, ಮಲ್ಲೇಶ್ ಮುಖಂಡರಾದ ಪದ್ಮನಾಬ್, ರಾಮಣ್ಣ ಮತ್ತಿತರರು ಹಾಜರಿದ್ದರು. ನಗರಸಭಾ ಸದಸ್ಯ ರಘುರಾಂ ರವರ ನಿಧನದಿಂದಾಗಿ ಕಳೆದ ಆರು ತಿಂಗಳಿನಿಂದ ತೆರವಾಗಿದ್ದ ನಗರಸಭಾ ಸದಸ್ಯ ಸ್ಥಾನದ ಮರು ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಗಳನ್ನು ಅಧಿಕೃತಗೊಳಿಸಿಲ್ಲ, ಕಾಂಗ್ರೆಸ್ ಪಕ್ಷದಿಂದ ಕೆ.ಜಿ.ದಿನೇಶ ಅಥವಾ ಕೆ.ಜಿ.ಗೋಪಾಲ್ ಹೆಸರು ಕೇಳಿಬರುತ್ತಿದೆ.
Comments