ಫುಟ್‍ಪಾತ್ ವ್ಯಾಪಾರಿಗಳಿಗೆ ಸಿಹಿಸುದ್ದಿ ಕೊಟ್ಟ ಸಿಎಂ ಕುಮಾರಸ್ವಾಮಿ..!

ಫುಟ್‍ಪಾತ್ ವ್ಯಾಪಾರಿಗಳಿಗೆ, ತಳ್ಳುವ ಗಾಡಿಯವರಿಗೆ, ಮೀಟರ್ ಬಡ್ಡಿ ದಂಧೆಯಿಂದ ಅವರನ್ನು ವಿಮುಕ್ತಿಗೊಳಿಸಲು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯೊಂದನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ ಭರವಸೆಯನ್ನು ನೀಡಿದರು.
ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿಯವರು ಫುಟ್‍ಪಾತ್ ವ್ಯಾಪಾರಿಗಳು, ತಳ್ಳುವ ಗಾಡಿ ವ್ಯಾಪಾರಿಗಳು ದಿನನಿತ್ಯವು ಮೀಟರ್ ಬಡ್ಡಿಯವರ ಮೊರೆ ಹೋಗುತ್ತಾರೆ. ಲಕ್ಷಾಂತರ ಜನ ಇದನ್ನೆ ಕೂಡ ಅವಲಂಬಿಸಿದ್ದಾರೆ. ಈ ಮೀಟರ್ ಬಡ್ಡಿಯಿಂದ ಅವರನ್ನು ವಿಮುಕ್ತಿಗೊಳಿಸಬೇಕಾಗಿದೆ. ಹಾಗಾಗಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ನಾವು ಪ್ರಣಾಳಿಕೆಯಲ್ಲಿಯೂ ಕೂಡ ಘೋಷಿಸಿದ್ದೆವು. ಅದರಂತೆ ಪ್ರತಿಯೊಬ್ಬ ಫುಟ್‍ಪಾತ್ ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳು ತಮ್ಮ ಆಧಾರ್‍ಕಾರ್ಡ್ ನೀಡಿ ಸಾಲ ಪಡೆದು, ಸಂಜೆಯ ವೇಳೆಗೆ ಮರುಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
Comments