ದೇವೇಗೌಡರ ಪರಮಾಪ್ತನಿಗೆ ಒಲಿಯಿತು ಈ ಸಚಿವ ಸ್ಥಾನ?
ಜೆಡಿಎಸ್ ನ ವರಿಷ್ಠರಾದ ದೇವೇಗೌಡ ಅವರ ಪರಮಾ ಆಪ್ತರಾದ ವಿಧಾನಪರಿಷತ್ನ ಸದಸ್ಯರಾದ ಟಿ.ಎ.ಶರವಣ ಅವರಿಗೆ ಸಚಿವ ಸ್ಥಾನವು ಸಿಗಲಿದೆ ಎಂಬ ಊಹಾಪೋಹ ಜೆಡಿಎಸ್ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ದೇವೇಗೌಡ ಅವರರ ದತ್ತುಪುತ್ರರಂತೆ ಇರುವ ಶರವಣ ಅವರು ಜೆಡಿಎಸ್ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಚುನಾವಣೆಗಳಲ್ಲಿ ಆರ್ಥಿಕ ನೆರವನ್ನು ಕೂಡಾ ನೀಡಿದ್ದಾರೆ ಎಂಬ ವಿಷಯ ಎಲ್ಲರಿಗೂ ತಿಳಿದಿರುವುದೇ ಹಾಗಾಗಿ ಶರವಣ ಸಚಿವ ಸ್ಥಾನ ನೀಡಿ ಋಣಸಂಧಾಯ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶರವಣ ಅವರೂ ಕೂಡ ಸಚಿವ ಸ್ಥಾನಕ್ಕಾಗಿ ದೇವೆಗೌಡರ ಬಳಿ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಿಧಾನಸಭಾ ಸದಸ್ಯರಲ್ಲದಿರುವುದು ಶರವಣ ಅವರಿಗೆ ಸಚಿವ ಸ್ಥಾನ ಸಿಗುವುದರಲ್ಲಿ ಆಗಲಿರುವ ಹಿನ್ನಡೆ ಎಂದು ಕೂಡ ಹೇಳಲಾಗುತ್ತಿದೆ. ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿದರೆ, ಉಳಿದ ಸದಸ್ಯರೂ ಕೂಡ ಸಚಿವ ಸ್ಥಾನಕ್ಕೆ ಬೇಡಿಕೆ ಇಡುವ ಎಲ್ಲಾ ಸಾಧ್ಯತೆಗಳು ಇರುತ್ತದೆ.. ಹಾಗಾಗಿ ಶರವಣ ಕುರಿತು ಜೆಡಿಎಸ್ ಪಕ್ಷ ಯೋಚಿಸಿ ತೀರ್ಮಾನ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.
Comments