ಅನಗತ್ಯ ದುಂದು ವೆಚ್ಚಕ್ಕೆ ಬ್ರೇಕ್ ಹಾಕಲು ಮುಖಮಂತ್ರಿ ಎಚ್’ಡಿಕೆ ಮಾಸ್ಟರ್ ಪ್ಲಾನ್..!!
ಆರ್ಥಿಕ ಭದ್ರತೆ ಕಾಯ್ದುಕೊಳ್ಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಟ್ಟು ನಿಟ್ಟಿನ ಕ್ರಮಕೈಗೊಂಡಿದ್ದು, ಅನಗತ್ಯ ದುಂದು ವೆಚ್ಚಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ನೊಂದಿಗೆ ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ದುಂದು ವೆಚ್ಚ ಕಡಿತಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಸರಕಾರದ ವತಿಯಿಂದ ತಮ್ಮನ್ನು ಸಹಿತವಾಗಿ ಯಾರಿಗೂ ವಿಶೇಷ ವಿಮಾನದ ಸವಲತ್ತಿಗೆ ಕತ್ತರಿ ಹಾಕಲಾಗುವುದು. ತುರ್ತು ಸಂದರ್ಭ ಮಾತ್ರ ವಿಶೇಷ ವಿಮಾನ ಬಳಕೆಗೆ ಕ್ರಮಕೈಗೊಳ್ಳುವುದಾಗಿ ಎಂದು ಮಾಹಿತಿ ನೀಡಿದರು. ಮುಂಬರುವ ಸಚಿವರು, ನಿಗಮ- ಮಂಡಳಿ ಅಧ್ಯಕ್ಷರಿಗೂ ಹೊಸ ಕಾರಿನ ಭಾಗ್ಯವನ್ನು ತಡೆಯಲಾಗಿದೆ. ಅಧಿಕಾರಿಗಳಿಗೂ ಹೊಸ ಕಾರು ಖರೀದಿಗೆ ಫುಲ್ ಸ್ಟಾಪ್ ಹಾಕಲು ಎಚ್’ಡಿಕೆ ನಿರ್ಣಯ ತೆಗೆದುಕೊಂಡಿದ್ದಾರೆ. ವಿಧಾನಸೌಧ ಮತ್ತು ಶಾಸಕರ ಕಚೇರಿ, ಮನೆಗಳ ನವೀಕರಣಕ್ಕೂ ಬ್ರೇಕ್ ಹಾಕಲಾಗಿದೆ. ಸಿಎಂ ಬೆಂಗಾವಲು ಪಡೆ ಕಡಿತಗೊಳಿಸಲು ಕುಮಾರಸ್ವಾಮಿ ನಿರ್ಧರಿಸಿದ್ದು, ಸಿಎಂ ಕಚೇರಿಯಲ್ಲೂ ಅನಗತ್ಯ ಸಿಬ್ಬಂದಿಗೆ ಗೇಟ್ ಪಾಸ್ ನೀಡಲು ತೀರ್ಮಾನ ಮಾಡಿದ್ದಾರೆ. ಈಗಾಗಲೇ ಸರಕಾರಿ ಬಂಗಲೆ ಮತ್ತು ಕಾರನ್ನು ಸಿಎಂ ಕುಮಾರಸ್ವಾಮಿ ನಿರಾಕರಿಸಿದ್ದಾರೆ.
Comments