ಅನಂತ್ ಕುಮಾರ್ ಹೆಗಡೆಗೆ ಖಡಕ್ ಟಾಂಗ್ ಕೊಟ್ಟ ಮುಖ್ಯಮಂತ್ರಿ ಎಚ್’ಡಿಕೆ

ಕುಮಟಾದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಶತಮಾನಗಳಷ್ಟು ಹಳೆಯ ಪಕ್ಷವಾದ ಕಾಂಗ್ರೆಸ್ ಗೆ ಇಂದು ಸಲಾಂ ಹೊಡೆಯುವ ಸ್ಥಿತಿ ಬಂದಿದೆ, ಪುಟಗೋಸಿ ಪಕ್ಷಕ್ಕೆ ಸಹ ಸಲಾಂ ಹೊಡೆಯುವ ಸ್ಥಿತಿ ಆಗಿರುವುದು ಶೋಚನೀಯ ಎಂದಿದ್ದಾರೆ.
ಆರ್.ವಿ.ದೇಶಪಾಂಡೆ ಬಿಜೆಪಿಗೆ ಬರುವುದಾದಲ್ಲಿ ಸ್ವಾಗತವಿದೆ ಎಂದ ಸಚಿವರು ಹಳಿಯಾಳ, ಯಲ್ಲಾಪುರದಲ್ಲಿ ಬಿಜೆಪಿ ಬಾವುಟ ಹಾರಿಸಿಯೇ ಸಿದ್ದ, ಇದಾಗಲೇ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ, ಇನ್ನುಳಿದ ಎರಡರಲ್ಲಿಯೂ ಬಿಜೆಪಿಯನ್ನು ಗೆಲ್ಲಿಸುವವರೆಗೆ ರಾಜಕೀಯ ಬಿಡುವುದಿಲ್ಲ ಎಂದು ಹೇಳಿದರು. "ರಾಜಕೀಯವೆಂದರೆ ಏನೆಂದು ತಿಳಿದವರು ಬಿಜೆಪಿಯವರು ಮಾತ್ರ, ನಾವು ರಾಜಕೀಯ ಪುಟಗೋಸಿಗಳಲ್ಲ" ಹೆಗಡೆ ಹೇಳಿದರು.
"ಮನುಷ್ಯನ ಮಾನ ಮುಚ್ಚಿಕೊಳ್ಳಲು ಪುಟಗೋಸಿ ಬೇಕು. ಅವನೆಷ್ಟೇ ಶ್ರೀಮಂತನಾದರೂ ಪುಟಗೋಸಿ ಇಲ್ಲದೆ ಹೊದರೆ ಮಾನ ಕಳೆದುಕೊಳ್ಳಬೇಕಾಗುತ್ತದೆ." ಎನ್ನುವ ಮೂಲಕ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಖಡಕಾಗಿ ಟಾಂಗ್ ನೀಡಿದ್ದಾರೆ. "ಕೇಂದ್ರ ಸಚಿವರ ಹೇಳಿಕೆ ಅವರ ಅನಾಗರಿಕತನವನ್ನು ತೋರುತ್ತಿದೆ ಎಂದ ಕುಮಾರಸ್ವಾಮಿ ಹಿಂದೂ ಸಂಸ್ಕೃತಿ ರಕ್ಷಿಸುವವರಾದ ನಿಮ್ಮಿಂದ ಇಂತಹಾ ಹೇಳಿಕೆ ಸಲ್ಲದು. ಇದು ಅವರ ಅಭಿರುಚಿ ಎಂತಹದೆನ್ನುವುದನ್ನು ಸಾರಿ ಹೇಳುತ್ತಿದೆ ಎಂದರು.
Comments