ರೈತರ ಸಾಲ ಮನ್ನಾವಾಗಲು ಈ ಎರಡು ದಾಖಲಾತಿಗಳು ಕಡ್ಡಾಯ..!!
ರಾಜ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೊಂಡು ಒಂದು ವಾರವಾಗಿದೆ.
ರಾಜ್ಯದಾದ್ಯಂತ ಮಾತ್ರವಲ್ಲ ದೇಶಾದ್ಯಂತ ಕೂಡ ಮೈತ್ರಿ ಸರ್ಕಾರದ ಪ್ರಮುಖ ಅಜೆಂಡ ರೈತರ ಸಾಲ ಮನ್ನಾದ ಬಗ್ಗೆ ಚರ್ಚೆಯಾಗುತ್ತಿದೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನು 15 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ಸಾಲ ಮನ್ನಾ ಮಾಡಲು ಆದೇಶಿಸಿದರೆ ಆಧಾರ್ ಹಾಗೂ ಪಾನ್ ಕಾರ್ಡ್ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರ ಪಹಣಿ ದಾಖಲೆ ಹಾಗೂ ಪಾನ್ ಕಾರ್ಡ್ ಹೊಂದಿದ್ದ ರೈತರಿಗೆ ಮಾತ್ರ ಸಾಲ ಮನ್ನಾ ಮಾಡಲಾಗಿತ್ತು. ಪಾನ್ ಕಾರ್ಡ್'ನಲ್ಲಿ ಎಲ್ಲ ಆರ್ಥಿಕ ವ್ಯವಹಾರಗಳ ದಾಖಲೆಗಳ ಸಂಪೂರ್ಣ ಚಿತ್ರಣ ಸರ್ಕಾರಕ್ಕೆ ಲಭ್ಯವಾಗಲಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಗೆ ಬ್ಯಾಂಕ್'ಗಳು ಆಧಾರ್ ಕಾರ್ಡ್ ಲಿಂಕ್ ಮಾಡಿದೆ. ಇದರಿಂದ ಸರ್ಕಾರಕ್ಕೆ ಅರ್ಹ ರೈತರಿಗೆ ಸಾಲ ಮನ್ನಾ ಮಾಡಲು ಸುಲಭವಾಗಲಿದೆ. ಹೆಚ್ಚು ತೆರಿಗೆ ಪಾವತಿಸುವವರು, ಶ್ರೀಮಂತರು, ಉದ್ಯಮಿಗಳು, ಜನಪ್ರತಿನಿಧಿಗಳು ಹಾಗೂ ಉನ್ನತಸ್ತರದವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಬಹುದು. ಸಿಎಂ ಕುಮಾರಸ್ವಾಮಿ ಈಗಾಗಲೇ ತಿಳಿಸಿದಂತೆ ಏಪ್ರಿಲ್ 1, 2009 ರಿಂದ ಡಿಸೆಂಬರ್ 31, 2017 ವರೆಗೆ ಸಾಲ ಮನ್ನ ಸಾಧ್ಯತೆಯಿದೆ. ಬಡವ, ಅತೀ ಬಡವ ರೈತರನ್ನು ಒಳಪಡಿಸಿದರೂ ಸರ್ಕಾರಕ್ಕೆ 35 ಸಾವಿರ ಕೋಟಿ ರೂ. ಹೆಚ್ಚು ಹೊರೆಯಾಗಲಿದೆ.
Comments