ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿ ಸ್ಥಾಪನೆ ಕುರಿತು ಸಿಎಂ ಮನವಿ

ಬೆಂಗಳೂರು ನಗರದಲ್ಲಿ ಅಮೆರಿಕ ರಾಜತಾಂತ್ರಿಕ ಕಚೇರಿಯನ್ನು ಸ್ಥಾಪಿಸುವಂತೆ ಸಿಎಂ ಕುಮಾರಸ್ವಾಮಿ ಅವರು ಅಮೆರಿಕ ನಿಯೋಗಕ್ಕೆ ಮನವಿಯನ್ನು ಮಾಡಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿಯನ್ನು ಭೇಟಿಮಾಡಿದ ಅಮೆರಿಕ, ನಿಯೋಗಕ್ಕೆ ಬೆಂಗಳೂರಿನಿಂದ ಅಮೆರಿಕಕ್ಕೆ ತೆರಳುವವರಿಗೆ ವೀಸಾ ನೀಡುವ ನಿಟ್ಟಿನಲ್ಲಿ ರಾಜ ತಾಂತ್ರಿಕ ಕಚೇರಿಯನ್ನು ತಕ್ಷಣದಲ್ಲಿ ಆರಂಭಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ. ಈ ಕಚೇರಿಯನ್ನು ಸ್ಥಾಪಿಸಲು ಅಗತ್ಯವಿರುವ ಜಾಗ ಹಾಗೂ ಇತರ ಎಲ್ಲಾ ಮೂಲ ಸೌಕರ್ಯವನ್ನು ರಾಜ್ಯ ಸರ್ಕಾರ ಒದಗಿಸಲಿದ್ದು, ಕಚೇರಿ ಪ್ರಾರಂಭಿಸುವಂತೆ ರಾಯಭಾರಿ ಕೆನ್ನೆತ್ ಜೆಸ್ಟರ್ ಗೆ ಮನವಿಯನ್ನು ಮಾಡಿದ್ದಾರೆ. ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಪ್ರಮುಖ ಹುದ್ದೆಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರವಾಸಿ ವೀಸಾದ ಅಡಿ ಅಮೆರಿಕಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು ಇತ್ತಿಚಿಗೆ ಹೆಚ್ಚಳವಾಗುತ್ತಿದೆ. ಹೀಗಾಗಿ ವಿವಿಧ ರೀತಿಯ ವೀಸಾ ಅಡಿ ಅಮೆರಿಕಕ್ಕೆ ಭೇಟಿ ನೀಡುತ್ತಿರುವವರಿಗೆ ಇಲ್ಲಿಯೇ ಕಚೇರಿ ಸ್ಥಾಪಿಸಿದರೆ ಸಹಾಯವಾಗುತ್ತದೆ ಎಂದು ಸಿಎಂ ಈ ಮೂಲಕ ತಿಳಿಸಿದ್ದಾರೆ.
Comments