ನಾನು ರಾಷ್ಟ್ರೀಯ ಪಕ್ಷಗಳ ಗುಲಾಮನಲ್ಲಾ, ಆರೂವರೆ ಕೋಟಿ ಕನ್ನಡಿಗರ ಗುಲಾಮ!

ಬೇಕಾಗಿತ್ತಾ ಇದೆಲ್ಲಾ? ಅದೇನೋ ಅಂತಾರೆ ಫ್ರಸ್ಟ್ರೇಷನ್? ಗಿಲ್ಟಿ? ನಿಮಗೇ ಏನು ಇಡೀ ದೇಶಕ್ಕೇ ಗೊತ್ತು ನಿಮಗೆ ಬಹುಮತ ಇಲ್ಲ ಅಂತ, ಹಿಟ್ಟು ಹಳಸಿತ್ತು! ನಾಯಿ ಹಸಿದಿತ್ತು ಅನ್ನೋಹಾಗೆ ಯಾಕೆ ಹೊಂದಾಣಿಕೆ ಮಾಡಿಕೊಂಡ್ರಿ? ಈಗ ಕಥೆ ಹೇಳೋ ಬದಲು ಅವತ್ತೆ ನಮಗೆ ಬಹುಮತ ಇಲ್ಲ ನಾವು ಸರ್ಕಾರ ರಚಿಸಲ್ಲಾ ಅಂದಿದ್ದರೆ ಮುಗಿದಿತ್ತು, ಈಗ ಹತಾಷೆಯ ಮಾತುಗಳನ್ನು ಆಡೋದು ತಪ್ಪುತ್ತಿತ್ತು. ಚುನಾವಣಾ ಸಮೀಕ್ಷೆ ಹೇಳ್ತಾ ಇದ್ದಿದ್ದೂ 15-20 ಸೀಟು ಗೆಲ್ಲಬಹುದೂ ಅಂತ, ಏನೋ ಮಂಡ್ಯ, ಮೈಸೂರು, ಹಾಸನ ಕಡೇ ಬಿಜೆಪಿ ಇನ್ನೂ ಬಲಾಡ್ಯವಾಗಿಲ್ಲ, ಜನಕ್ಕೆ ಬೇರೆ ದಾರಿ ಇಲ್ಲದೆ ನಿಮಗೆ ಮತ ನೀಡಿದ್ದಾರೆ. ಅಲ್ಲಾ ಸ್ವಾಮಿ, ರಾಜ್ಯದ 82% ಜನ ನಿಮ್ಮನ್ನ ಒಪ್ಪಿಕೋತಾ ಇಲ್ಲ ಆದ್ರೂ ಬಂಡ ಧೈರ್ಯದಿಂದ ಮುಖ್ಯಮಂತ್ರಿಯಾಗಿದ್ದೀರಿ, ಯಾಕೆ ಇಷ್ಟು ಹಪಾಹಪಿತನಾ? ಹತಾಷೆ? ಇನ್ನೊಬ್ಬರ ಹಂಗು, ದಿಲ್ಲೀನಲ್ಲಿ ಕೈ ಕಟ್ಟಿ ನಿಂತಾಗಲೇ ಗೊತ್ತಾಯಿತು ನಿಮ್ಮ ಭವಿಷ್ಯ ಮುಂದೆ ಹೇಗೆ ಇರುತ್ತದೆ ಅಂತಾ, ನೀವು ಹೀಗೆ ಮುತ್ತುಗಳನ್ನ ಉದುರಿಸುತ್ತಾ ಇದ್ದರೆ ಮುಂದಿನ ಚುನಾವಣೆಯಲ್ಲಿ ಖಂಡಿತಾ ಮುವತ್ತೇಳು ಹೋಗಿ ಮೂರರಿಂದ ಏಳು ಆಗುತ್ತೆ.
Comments