ಬ್ರೇಕಿಂಗ್ ನ್ಯೂಸ್ : ಬಿ.ಎಸ್.ವೈ ಗೆ ತಿರುಗೇಟು ಕೊಟ್ಟ ದೊಡ್ಡಗೌಡ್ರು ಬಿಚ್ಚಿಟ್ಟ ಸ್ಪೋಟಕ ವಿಷಯ..!!

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ವೇಳೆ ತಮ್ಮ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪನವರಿಗೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಈ ರೀತಿ ತಿರುಗೇಟು ನೀಡಿದರು. ಯಾರು ಏನೇನು ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ನಮಗೆ ಅವರ ಸರ್ಟಿಫಿಕೆಟ್ ಬೇಕಾಗಿಲ್ಲ ಎಂದರು.
ಒಬ್ಬ ಮಹಾನ್ ನಾಯಕರು (ಬಿ.ಎಸ್.ಯಡಿಯೂರಪ್ಪ) ಸದನದಲ್ಲಿ ವೀರಾವೇಶದಿಂದ ಮಾತನಾಡಿದ್ದನ್ನು ನೋಡಿದ್ದೇನೆ. ನಾವು ಜನತೆಯ ಆಶೀರ್ವಾದದಿಂದ 37 ಸ್ಥಾನ ಗೆದ್ದಿದ್ದೇವೆ ಎಂದು ಕಿಡಿಕಾರಿದರು. ಸದನದಲ್ಲಿ ಅಪ್ಪ-ಮಕ್ಕಳು ದಗಲ್ಬಾಜಿಗಳು ಅಂತಾ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳ್ತಾ ಇದ್ರು. ಈಗ ಅವರಿಗೆ ಉತ್ತರ ಕೊಡೊದಿಲ್ಲ. ಆ ಕುರಿತು ಮಾತನಾಡಲು ಕಾಲ ಬಹಳ ಹತ್ತಿರವಿದೆ. ಯಾರ್ಯಾರು ಯಾರಿಗೆಲ್ಲ ಏನೇನು ಮೋಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಯಡಿಯೂರಪ್ಪ ಅವರ ಹೆಸರು ಹೇಳದೆ ಅವರ ಮಾತಿನ ಶೈಲಿಯನ್ನು ಅನುಕರಿಸಿ ವ್ಯಂಗ್ಯವಾಡಿದರು. ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಕ್ಕೆ ನಾನು ಅವರಿಗೆ ಅಭಾರಿಯಾಗಿದ್ದೇನೆ. ಇದಕ್ಕೆ ಉತ್ತರ ಕೊಡೋದು ಜನರು. ಹಾಗಾಗಿ ಆ ಮಹಾನ್ ನಾಯಕರಿಂದ ನಮಗೆ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ಜೆಡಿಎಸ್ ವರಿಷ್ಠರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಸಂಖ್ಯಾತರಿಗೆ ಜೆಡಿಎಸ್ ಪಕ್ಷಕ್ಕೆ ಮತ ಚಲಾಯಿಸಿದರೆ ಬಿಜೆಪಿಗೆ ಹೋಗುತ್ತದೆ ಎಂದು ಕೆಲವರು ಹೇಳಿದ್ದರು. ಈಗಲಾದರೂ ಜೆಡಿಎಸ್‌ನ ಬದ್ಧತೆಯನ್ನು ಆ ಸಮುದಾಯವು ಅರ್ಥ ಮಾಡಿಕೊಳ್ಳಬೇಕಿದೆ. ರಾಜಕೀಯದಲ್ಲಿ ಮುಸಲ್ಮಾನರಿಗೆ ಯಾರು ಮೀಸಲಾತಿ ಸೌಲಭ್ಯ ಕೊಟ್ಟರು ಎಂಬುದನ್ನು ಅರಿತುಕೊಳ್ಳಬೇಕು. ಅವರಿಗೆ ಮೀಸಲಾತಿ ಕೊಟ್ಟಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೇ ಎಂದು ದೇವೇಗೌಡರು ಪ್ರಶ್ನಿಸಿದರು. ಮುಸ್ಲಿಮರಿಗೆ ಬೆಂಗಳೂರು ಮೇಯರ್ ಸ್ಥಾನವನ್ನು ಕಲ್ಪಿಸಿದ್ದು ನಾವು. ರಾಜಕೀಯವಾಗಿ ಶಕ್ತಿ ತುಂಬಿದ್ದೇವೆ. ಪ್ರತಿಯೊಂದು ಹಂತದಲ್ಲೂ ಅಲ್ಪಸಂಖ್ಯಾತರ ರಕ್ಷಣೆಗೆ ಪಕ್ಷ ಹೋರಾಟ ನಡೆಸಿದೆ.
Comments