ಸರೆಗಮಪಾ ಸೀಸನ್ 14ರಲ್ಲಿ ದ್ವಿತೀಯ ಸ್ಥಾನ ಪಡೆದ ಕೀರ್ತನ






ಜೀ ಕನ್ನಡ ವಾಹಿನಿಯ ಜನಪ್ರಿಯ ಸರಿಗಮಪ ಲಿಟ್ಲ್ ಚಾಂಪ್ ಸೀಸನ್-14 ರ ಸ್ಫರ್ಧೆಯಲ್ಲಿ ಕು.ಕೀರ್ತನಾ, ಜ್ಞಾನೇಶನ ಜೊತೆ ದ್ವಿತೀಯ ಸ್ಥಾನ ಹಂಚಿಕೊಂಡರೆ, ವಿಶ್ವಪ್ರಸಾದ್ ಪ್ರಥಮ ಸ್ಥಾನದೊಂದಿಗೆ ಗೆಲುವಿನ ನಗೆ ಬೀರಿದ್ದಾನೆ. ಅಂತಿಮ ಸುತ್ತಿನಲ್ಲಿದ್ದ ಮತ್ತೊಬ್ಬ ಅಭ್ಯರ್ಥಿ ತೇಜಸ್ ಶಾಸ್ತ್ರಿ ನಾಲ್ಕನೇ ಸ್ಥಾನಪಡೆದುಕೊಂಡರೆ, ಕೊನೆಯ ಸುತ್ತಿನ ಏಕೈಕ ಬಾಲಕಿಯಾಗಿದ್ದ ನಮ್ಮ ಊರಿನ ಹುಡುಗಿ, ಕೀರ್ತನಾಳಿಗೆ ಹಾಡಲು ಸ್ಪೂರ್ತಿ ಕೊಟ್ಟಿದ್ದು, ಪ್ರೋತ್ಸಾಹಿಸಿದ್ದು ತಾತ ಹನುಮಂತಯ್ಯ, ತಂದೆ ತಾಯಿ ಮತ್ತು ಮಾವ ರವಿರಾಜ್ ಸಹಕಾರದೊಂದಿಗೆ ಅಂತಿಮ ಸುತ್ತು ತಲುಪಿ ರನ್ನರ್ ಅಪ್ ಟ್ರೋಪಿ ಮತ್ತು ಎರಡು ಲಕ್ಷ ರೂ. ನಗದು ಬಹುಮಾನ ತನ್ನದಾಗಿಸಿದೊಂಡಿದ್ದಾಳೆ. ನಮ್ಮ ಊರಿಗೆ ಹೆಮ್ಮೆ ತಂದ ಕೀರ್ತನಾಗೆ ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ನಾಗೇಶ್, ಗಾಯಕ ಕೃಷ್ಣ ಬಲಬದ್ರಿ, ಗಾಯತ್ರಿಪೀಠ ಮಿತ್ರ ಬಳಗದ ಕಾರ್ಯದರ್ಶಿ ರಮೇಶ್ ಅಭಿನಂದಿಸಿದ್ದಾರೆ.
Comments