ಅಣ್ಣಾವ್ರ ಅಭಿಮಾನಿ, ಕನ್ನಡದ ಕಂದ ಚಂದನ್-ನುಡಿನಮನ ಸ್ನೇಹಿತರಿಂದ




ಕನ್ನಡ ಭಾಷೆಯ ಅಭಿಮಾನಿ, ಟಿ.ವಿ. ನಿರೂಪಕ, ಸ್ನೇಹದ ಪ್ರತೀಕವಾದ ಗೆಳೆಯ, ದೊಡ್ಡಬಳ್ಳಾಪುರದ ಹೆಸರನ್ನು ಬೆಳಗಿದ ಚಂದನ್ ಅಗಲಿಕೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತದೆ:- ಪ್ರಮೀಳಾ ಮಹದೇವ್, ಒಂದೇ ಒಂದು ಆಂಗ್ಲ ಪದವನ್ನೂ ಬಳಸದೇ, ಕನ್ನಡವನ್ನ ಅಷ್ಟು ಸುಲಲಿತವಾಗಿ, ಸ್ಪಷ್ಟವಾಗಿ ಮಾತನಾಡಿ ಕನ್ನಡಿಗರ ಮನಸ್ಸಲ್ಲಿ ಅಚ್ಚಳಿಯದೆ ಉಳಿದ್ದಿದ್ದ ಅಣ್ಣಾವ್ರ ಅಭಿಮಾನಿ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವಂತ ಶಕ್ತಿ ನೀಡಲಿ-ನಾಗೇಶ್, ಸಂಸ್ಕೃತಿ ಟ್ರಸ್ಟ್. ನಮ್ಮ ಊರಿನ ದೊಡ್ಡಬಳ್ಳಾಪುರದ ಪ್ರತಿಭಾವಂತ ಕಲಾವಿದ ಚಂದನ್ ಮತ್ತು ನಮ್ಮ ಎಲ್ಲರ ನೆಚ್ಚಿನ ಗಾಯಕಿ ಶ್ರೀಮತಿ ಸಂತೋಷಿ ಅವರು ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ- ಕೃಷ್ಣ ಬಲಬದ್ರಿ, ಗಾಯಕ ಬೆಳೆಯುತ್ತಿರುವ ಪತಿಭೆ ನಿಜಕ್ಕೂ ಅನ್ಯಾಯವಾಯ್ತು, ಬಹಳ ನೋವಿನ ವಿಚಾರ, ಶ್ರೀಯುತ ಚಂದನ್ ಮತ್ತು ನನ್ನ ಸಹೋದರಿ ಖ್ಯಾತ ಗಾಯಕಿ ಶ್ರೀಮತಿ ಸಂತೋಷಿ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಅವರ ಕುಟುಂಬಕ್ಕೆ ಈ ದುಖಃವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ- ರವಿರಾಜ್, ಗಾಯಕ.
Comments