ರೈತರ ಸಾಲ ಮನ್ನಾ ಕುರಿತು ಹೆಚ್.ಡಿ.ಕೆ ಹೇಳಿದ್ದೇನು?
ರೈತರ ಸಾಲಮನ್ನಾ ವಿಚಾರವೇ ನನ್ನ ಮೊದಲ ಆದ್ಯತೆ ಎಂದು ನೂತನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿಎಂ ಆದ ಮೇಲೆ ಮೊದಲ ಬಾರಿಗೆ ತಂದೆಯನ್ನು ಭೇಟಿ ಮಾಡಿದ್ದೇನೆ.
ಸಾಕಷ್ಟು ವಿಚಾರಗಳ ಬಗ್ಗೆ ಸಮಾಲೋಚನೆಗಳನ್ನು ಕೂಡ ನಡೆಸಿದ್ದೇವೆ. ರಾಜಕೀಯ ವಿದ್ಯಾಮಾನಗಳ ಬಗ್ಗೆ ಸಲಹೆಯನ್ನು ನೀಡಿದ್ದಾರೆ. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು, ಜನರ ಹಿತಾಸಕ್ತಿ ಕಾಪಾಡುವುದು, ಸುಭದ್ರ ಸರ್ಕಾರ ನೀಡುವುದರ ಬಗ್ಗೆ ಸಲಹೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ರೈತರ ಸಾಲ ಮನ್ನಾ ವಿಚಾರ ಸಂಬಂಧ ಅತಿ ಶೀಘ್ರದಲ್ಲೆ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆಯನ್ನು ನಡೆಸುತ್ತೇನೆ. ಅದಾದ ಬಳಿಕ ಸಾಲ ಮನ್ನಾದ ಘೋಷಣೆ ಮಾಡುತ್ತೇನೆ. ರೈತರ ಸಾಲ ಮನ್ನಾ ವಿಚಾರವೇ ನನ್ನ ಮೊದಲ ಆದ್ಯತೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
Comments