ನಮಸ್ಕಾರ ಕುಮಾರಣ್ಣೋ.......ನಮಸ್ಕಾರ!
ನೆನ್ನೆ ಸಂಜಿ ವಾಟ್ಸಪ್ನಲ್ಲಿ ಒಂದು ಫೋಟೋ ಬಂತು ನೋಡ್ತಿನೀ.....ವಾವ್, ಇಟಲಿ ರಾಣಿ ಸ್ವಾನಿಯಾ ಜೊತೆ ನಿಂತಿರೋ ಪಟಾ! ಅಬ್ಬಾ ಏನ್ ಯೋಗಾ ಸಾಮಿ ನಿಂದೂ, ಈ ಕಡೆ ರಾವುಲಾ, ಆ ಕಡೀಗೆ ಸ್ವಾನಿಯಾ, ಅತ್ತಿತ್ತಲಾಗೆ ಇಬ್ರು ಬಟ್ರೂ, ಸೆಂಟ್ರಾಗ್ ನೋಡಿದ್ರೇ ನೀವೂ.....ನಂ ಕುಮಾರಣ್ಣಾ......ವಾರೆವ್ಹಾ! ಅದ್ಸರಿ ತಮ್ ಮಕಾ ಯಾಕ್ರಲಾ ಹಂಗ್ ಕಪ್ಪಿಟ್ಟಿದೆ? ಅಲ್ಲಾ ಒಂಚೂರಾದ್ರೂ ಕಳೆನೇ ಇಲ್ವಲ್ಲಾ? ಯಾಕ್ಸಾಮೀ ಏನಾಯ್ತು? ಕರೆಂಟ್ಸಾಕ್ ಏನಾರಾ ಒಡೀತಾ ಹೆಂಗೆ? ಅಲ್ಕಣಣ್ಣೋ ನಂ ಸಿದ್ರಾಂನುಂಡಿ ಸಿದ್ರಾಮಂಗೇ ಆಯಮ್ಮ ದರ್ಸನ ಕೊಡೋಲ್ಲಾ. ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡ ಎಲ್ಡು ದಿನಕ್ಕೇ ತಂಗೆ ದರ್ಸನ ಭಾಗ್ಯ ಸಿಕ್ಕೋಗದೆ! ಯಾಕ್ರಲಾ ಹಂಗ್ ನಿಂತ್ದೀರಾ? ನಿಂ ತಲೀಲಿ ಏನ್ ಓಡ್ತಾ ಐತ್ರಲಾ ನಾ ಯಾರ ಗುಲಾಮ್ನೂ ಅಲ್ಲಾ, ಆರೂವರೆ ಕ್ವಾಟಿ ಕನ್ನಡಿಗರ ಗುಲಾಮ ನಾನು ಅಂದಿದ್ದಾ?
ಇಲ್ಲಾ ನಿಮ್ಮ ಪ್ರಣಾಳಿಕೆಗಳಲ್ಲಿರೋ ಲಿಸ್ಟಾ? ರೆಸಾರ್ಟ್ಗಳಲ್ಲಿ ಕೂಡಾಕಿರೋ ಸಾಸಕರ ಚಿಂತೆನಾ? ಚುನಾವಣಾ ಭಾಷ್ಣಗ್ಳಲ್ಲಿ ಎಂಗಂದ್ರಂಗೆ ಇಬ್ರುಗೂ ಬೈದಿದ್ದೀನಿ, ಹಿಯಾಳ್ಸಿದ್ದೀನಿ, ಈಗ ಇವ್ರ ಮುಂದೇನೆಯಾ ಹಿಂಗ್ ಕೈಕಟ್ಟಿ ನಿಲ್ಲೋ ಪರಿಸ್ಥಿತಿ ಬಂತಲ್ಲಾ ಅಂತಾನಾ? ಈ ಯಮ್ಮನ್ ಜ್ವತೆ ಯಾ ಬಾಸೇಲಿ ಮಾತ್ನಾಡೋದು ಅನ್ನೋ ಯೋಚ್ನೇನಾ? ಹೇ ಬಿಡ್ರಪ್ಪಾ ನೀವ್ ರಾಜಕಾರಣಿಗಳು ಮೂರು ಕೊಟ್ಟ್ರೇ ಇತ್ಲಾ ಕಡೆ! ಆರು ಕೊಟ್ರೇ ಅತ್ಲಾ ಕಡೆ ಓಯ್ತೀರಾ, ಇದೆಲ್ಲಾ ಇದ್ದದ್ದೇಯಾ, ನಾಳೀಕೆ ಪಿರಮಾಣ್ವಚನಾ ಐತಂತ್ರೆಲ್ಲಾ ನಿಮ್ಮ ನಿಷ್ಠಾವಂತ ಕಾರ್ಯಕರ್ತ ಮರಿಸ್ವಾಮಿನ್ನಾ ಒಸಿ ಕರೀರೆಲ್ಲಾ...ಕರೀತೀರೆಲ್ಲಾ? ಓ....ಮರ್ತೇ ಬಿಟ್ಟಿವ್ನಿ ನಾನ್ಯಾರೂ ಅಂತಾ ಏಳೋದನ್ನಾ..... ಸಾಮುಂಡೇಸ್ವರೀನಲ್ ಮರಿಸ್ವಾಮಿ ಇಲ್ವಾ ಅವ್ನ ದೂರದ ಸಂಬಂದಿ....ದೂರ ಅಂದ್ರೆ..... ಬಹುದೂರದ ಸಂಬಂದಿ
Comments