ರೈತರಿಗೆ ಬಂಪರ್ ಕೊಡುಗೆ ಕೊಟ್ಟ ಮಣ್ಣಿನ ಮಗ ಕುಮಾರಣ್ಣ

ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಈ ಬಾರಿ ಸಿಕ್ಕಾಪಟ್ಟೆ ಗೊಂದಲಗಳು ಮನೆಮಾಡಿದ್ದವು..ಸರ್ಕಾರವನ್ನು ಯಾರು ನಡೆಸುತ್ತಾರೆ ಎಂಬ ಗೊಂದಲಗಳು ಕೂಡ ಇದ್ದವು. ಸದ್ಯದ ಮಟ್ಟಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರವನ್ನು ನಡೆಸಲು ತಿರ್ಮಾನಿಸಲಾಗಿದೆ.
ಸರ್ಕಾರದಲ್ಲಿ ಸದ್ಯಕ್ಕೆ ಹಣ ಇಲ್ಲ, ರಾಜ್ಯ ಈಗಾಗಲೇ ಸಾಲದ ಸುಳಿಯಲ್ಲಿದೆ ಹೀಗಿರುವಾಗ ಸಾಲಮನ್ನಾ ಹೇಗೆ ಸಾಧ್ಯ ಎಂದು ಹೇಳಿದ್ದ ಕಾಂಗ್ರೆಸ್‍ನ ನಾಯಕರ ಮಾತಿಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಂಪೂರ್ಣವಾದ ಸಹಕಾರ ಸಿಕ್ಕರೆ ನಾನು ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಂಪೂರ್ಣ ಸಹಕಾರ ಸಿಗದಿದ್ದರೂ ನಾನು ಸಾಲಮನ್ನಾ ಮಾಡುತ್ತೇನೆ, ನನಗೆ ಈ ರಾಜ್ಯದ ರೈತರು ಉಳಿಯಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಒಟ್ಟಾರೆಯಾಗಿ ಕುಮಾರಸ್ವಾಮಿ ರೈತರ ಪರ ನಿಂತಿರುವುದಕ್ಕೆ ಎಲ್ಲಾ ಕಡೆ ಪ್ರಶಂಸೆ ಸಿಗುತ್ತಿದೆ.
Comments