ಬ್ರೇಕಿಂಗ್ ನ್ಯೂಸ್ : ಬಿಜೆಪಿಗೆ ಬಿಗ್ ಶಾಕ್ ನೀಡಲು ಮಾಸ್ಟರ್ ಪ್ಲಾನ್ ನೊಂದಿಗೆ ಸಜ್ಜಾಗಿರುವ ಡಿಕೆಶಿ- ಎಚ್’ಡಿಕೆ

ಅಪರೇಷನ್ ಕಮಲದ ಮೂಲಕ ತಮ್ಮ ಪಕ್ಷದ ಶಾಸಕರಿಗೆ ಗಾಳ ಹಾಕಲು ಮುಂದಾಗಿದ್ದ ಬಿಜೆಪಿಗೆ ಬಿಗ್ ಶಾಕ್ ನೀಡುವುದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಯ ಸರಿ ಸುಮಾರು 10 ಶಾಸಕರನ್ನು ತಮ್ಮತ್ತ ಸೆಳೆಯುವುದಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಡಿಕೆಶಿ-ಎಚ್'ಡಿಕೆ ಮಾಸ್ಟರ್ ಪ್ಲಾನ್ ವೊಂದನ್ನು ಸಿದ್ದಮಾಡಿಕೊಂಡಿದ್ದಾರೆ ಎನ್ನಲಾಗಿದೆ. .
ಸಚಿವ ಸಂಪುಟದ ವೇಳೆ ಕೆಲವು ಖಾತೆಗಳನ್ನು ನಮ್ಮ ಬಳಿಯೇ ಇಟ್ಟುಕೊಳ್ಳೋಣ, ಇರೋ ಕಾಂಗ್ರೆಸ್ ನಿಂದ 78, ಜೆಡಿಎಸ್ ನಿಂದ 37 ಹಾಗೂ ಪಕ್ಷೇತರ ಶಾಸಕರ 2 ಬೆಂಬಲ ಸೇರಿದಂತೆ ಒಟ್ಟು 117 ಮಂದಿ ಶಾಸಕರು ನಮ್ಮ ಜೊತೆ ಇದ್ದಾರೆ ಪರಿಸ್ಥಿತಿ ಯಾವಗ ಏನು ಬೇಕಾದ್ರು ಆಗಿ ಸರ್ಕಾರ ಪತನಕ್ಕೆ ಕಾರಣವಾಗಬಹುದು ಹೀಗಾಗಿ ನಾವು ಸಚಿವ ಸಂಪುಟದ ನಂತರ ಬಿಜೆಪಿಯಲ್ಲಿರುವ ಸಚಿವ ಸ್ಥಾನದ ಅಕಾಂಕ್ಷಿಗಳಿಗೆ ನಮ್ಮತ್ತ ಬರಮಾಡಿಕೊಳ್ಳುವ ಹಾಗೇ ಮಾಡಿಕೊಂಡು ಅವರಿಗೆ ಸಚಿವ ಸ್ಥಾನ ನೀಡಿ ಅವರಿಗೆ ಉಪಚುನಾವಣೆಯಲ್ಲಿ ಟಿಕೇಟ್ ನೀಡಿ ಗೆಲ್ಲಿಸಿಕೊಂಡು ಬರೋಣ ಅಂತ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಪರೇಷನ್ ಕಮಲಕ್ಕೆ ನಾವು ಮುಂದಾಗಲೇ ಬೇಕು ಇಲ್ಲವಾದರೆ ಸಣ್ಣಪುಟ್ಟ ವಿಷಯಗಳನ್ನು ಇಟ್ಟುಕೊಂಡು ನಮ್ಮ ಸರ್ಕಾರದ ವಿರುದ್ದ ಬಿಜೆಪಿ ಹರಿಹಾಯುವ ಸನ್ನಿವೇಶ ಕೂಡ ಹೆಚ್ಚಾಗಿರುತ್ತದೆ. ಹೀಗಾಗಿ ಅವರು ನಮ್ಮ ಶಾಸಕರನ್ನು ಸೆಳೆಯುವ ಮುನ್ನವೇ ನಾವು ಅವರ ಶಾಸಕರನ್ನು ಸೆಳೆಯುವ ಕಸರತ್ತು ಮಾಡಿ ಯಶಸ್ವಿಯಾಗಬೇಕು ಎಂದು ಮಾಸ್ಟರ್ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ ಎಂದು ಮೂಲಗಳು ತಿಳಿಸಿವೆ.
Comments