ಕಾವೇರಿ ನೀರು ಹಂಚಿಕೆ ಕುರಿತು ರಜನಿಕಾಂತ್ ಹೇಳಿಕೆಗೆ ಖಡಕ್ ತಿರುಗೇಟು ಕೊಟ್ಟ ಮಣ್ಣಿನ ಮಗ ಕುಮಾರಣ್ಣ
ಇಂದು ತಮಿಳುನಾಡಿನಲ್ಲಿ ಸುದ್ದಿಗೋಷ್ಠಿ ನಡಿಸಿ ಮಾತನಾಡಿದ ಖ್ಯಾತ ನಟ ರಜನಿಕಾಂತ್ ಅವರು, ಯಾವುದೆ ಸರಕಾರ ಬಂದರೂ ತಮಿಳುನಾಡಿಗೆ ನೀರು ಬಿಡಬೇಕು ಎಂದು ಹೇಳಿದರು. ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲೇಬೇಕು. ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ರಜನಿಕಾಂತ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಣ್ಣಿನ ಮಗ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ರಜನಿಕಾಂತ್ ಮೊದಲು ನಮ್ಮ ರಾಜ್ಯಕ್ಕೆ ಬಂದು ಇಲ್ಲಿನ ಜಲಾಶಯಗಳ ಪರಿಸ್ಥಿತಿಯನ್ನು ಖುದ್ದಾಗಿ ನೋಡಲಿ. ನಮ್ಮ ರಾಜ್ಯದ ಪರಿಸ್ಥಿತಿಯನ್ನು ಮೊದಲು ಅವರು ಅರಿತುಕೊಳ್ಳಲಿ. ನಮಗೆ ನೀರಿದ್ದರೆ ಅಲ್ಲವೇ ತಮಿಳುನಾಡಿಗೆ ನೀರು ಬಿಡಲು ಸಾಧ್ಯ ಎಂದು ಖಡಕ್ಕಾಗಿ ತಿರುಗೇಟು ಕೊಟ್ಟರು.
Comments