ಕುಮಾರಣ್ಣ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ರಾಜ್ಯದ ಜನರಿಗೆ ಕಾದಿದೆ ಬಂಪರ್ ಗಿಫ್ಟ್..!!!

20 May 2018 5:02 PM |
78025 Report

ಬಹುಮತವನ್ನು ಸಾಬೀತುಪಡಿಸಲಾಗದೆ ಬಿ.ಎಸ್.ಯಡಿಯೂರಪ್ಪನವರು ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಕೂಡ ಕೇಳದೆ, ಬಾವುಕರಾಗಿ ತಮ್ಮ ಬಾಷಣವನ್ನು ಮುಗಿಸಿ ನೇರವಾಗಿ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ನೀಡಿದ್ದಾರೆ. ಇದರಿಂದ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಸರ್ಕಾರ ರಚನೆ ಆಗಲಿದ್ದು ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಕೂಡಲೇ ಅವರು ಹೇಳಿದಂತೆ ಕೆಲವು ಯೋಜನೆಗಳನ್ನು ಜಾರಿಗೆ ತರಲಿದ್ದಾರೆ. ರೈತರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಕೆಲವು ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಹೇಳಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದ್ದಾರೆ. ಹೌದು… ನಾನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡಲಿದ್ದಾರೆ. ಈಗಾಗಲೇ ಅದರ ಬಗ್ಗೆ ಮಾತುಕತೆ ಆಡಿರುವ ಕುಮಾರಸ್ವಾಮಿ ಅವರು ಸಹಕಾರಿ ಬ್ಯಾಂಕುಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡಲಿದ್ದಾರೆ.

ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೆಲವು ಯೋಜನೆಗಳನ್ನು ರೂಪಿಸಿಕೊಂಡಿದ್ದು, ಅವುಗಳನ್ನು ಘೋಷಣೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಗರ್ಭಿಣಿ ಸ್ತ್ರೀಯರಿಗೆ ಕೊನೆಯ ಆರು ತಿಂಗಳು 6000 ಮಾಸಿಕ ಧನ ಸಹಾಯ ನೀಡಲಿದ್ದಾರೆ. ವೃದ್ಧಾಪ್ಯದಲ್ಲಿ ಯಾವುದೇ ಕಾರಣಕ್ಕು ತಂದೆ ತಾಯಂದಿರು ಕಷ್ಟಪಡಬಾರದು ಎಂದು 65 ವರ್ಷ ಮೇಲ್ಪಟ್ಟ ವೃದ್ಧರಿಗೆ 5000 ಸಾವಿರ ಮಾಸಿಕ ಧನಸಹಾಯವನ್ನು ಘೋಷಿಸಲಿದ್ದಾರೆ. ಈ ರೀತಿ ಘೊಷಿಸುವುದರಿಂದ ವೃದ್ದ ತಂದೆ ತಾಯಿಯರನ್ನು ಅವರ ಮಕ್ಕಳು ಚನ್ನಾಗಿ ನೋಡಿಕೊಳ್ಳುತ್ತಾರೆ. ವೃದ್ದ ದಂಪತಿಗಳು ತಮಗೆ ಬರುವ ಹಣದಿಂದ ಬೇರಾರ ಮೇಲು ಅವಲಂಬಿತರಾಗದೇ ಜೀವನ ಸಾಗಿಸುತ್ತಾರೆ ಎಂದು ಈ ಯೋಜನೆಯನ್ನು ಜಾರಿಗೆ ತರಲಿದ್ದಾರಂತೆ. ಇನ್ನು ಬೇರೆ ಬೇರೆ ವರ್ಗಗಳ ಜನರ ಒಳಿತಿಗಾಗಿ ಇನ್ನು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂದು ಮೂಲಗಳು ತಿಳಿಸಿವೆ.

 

Edited By

Shruthi G

Reported By

hdk fans

Comments