ದೊಡ್ದಬಳ್ಳಾಪುರದ ಜೆಡಿಎಸ್ ಪಕ್ಷದ ವತಿಯಿಂದ ಹುಟ್ಟುಹಬ್ಬ ಆಚರಣೆ
ಇಂದು ನಗರದಲ್ಲಿರುವ ತಾಯಿ-ಮಗು ಆಸ್ಪತ್ರೆಯಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಹೆಚ್.ಡಿ.ದೇವೇಗೌಡ ರವರ 86ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಬಿ.ಮುನೇಗೌಡರು ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಗಳನ್ನು ವಿತರಣೆ ಮಾಡುವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು. ಪಕ್ಷದ ಪದಾಧಿಕಾರಿಗಳಾದ ತಾಲ್ಲೂಕು ಕಾರ್ಯಾಧ್ಯಕ್ಷ ಕೆಂಪರಾಜು, ನಗರ ಕಾರ್ಯಾಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ನಗರ ಅಧ್ಯಕ್ಷ ರವಿಕುಮಾರ್, ನಗರಸಭಾ ಸದಸ್ಯ ಶಿವಕುಮಾರ್, ಮುಖಂಡರಾದ ಸತ್ಯನಾರಾಯಣ್, ನಾಗರಾಜು ಮತ್ತು ಮುನೇಗೌಡರ ಅಭಿಮಾನಿಗಳು ಜೊತೆಯಲ್ಲಿದ್ದರು.
Comments