ಬ್ರೇಕಿಂಗ್ ನ್ಯೂಸ್ : ಬಿಜೆಪಿ ಗೆ ಬಿಗ್ ಶಾಕ್ , ‘ಕಮಲ’ದ ಒಂದು ದಳ ಪತನ
ಬಹುಮತವಿಲ್ಲದೆ ಸರಕಾರ ರಚನೆಗೆ ರಾಜ್ಯಪಾಲರು ಬಿಜೆಪಿಯನ್ನು ಆಹ್ವಾನಿಸಿದ್ದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೊರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ನಾಳೆಯೇ ವಿಶ್ವಾಸ ಮತಯಾಚನೆ ಮಾಡಬೇಕು, ನಾಳೆ ಸಂಜೆ 4 ಗಂಟೆಗೆ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ಬಿಜೆಪಿಗೆ ಸುಪ್ರೀಂ ಕೊರ್ಟ್ ಸೂಚಿಸಿದೆ.
ಕಾಂಗ್ರೆಸ್-ಜೆಡಿಎಸ್ ಗೆ ಬಿಗ್ ಶಾಕ್ ನೀಡಲು ಹೊರಟ ಬಿಜೆಪಿಗೆ ಇದೀಗ ದೊಡ್ಡ ಶಾಕ್ ಆಗಿದ್ದು, ಬಿಜೆಪಿ ಶಾಸಕರೋರ್ವರು ಜೆಡಿಎಸ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಜೆಡಿಎಸ್ ನ ಬಲ ಇನ್ನಷ್ಟು ಹೆಚ್ಚಾಗಿದೆ. ಪೀತಂಗೌಡ ಜೆಡಿಎಸ್ ಗೆ ಬೆಂಬಲ ಸೂಚಿಸುತ್ತಿರುವ ಬಿಜೆಪಿ ಶಾಸಕ ಎಂದು ಹೇಳಲಾಗಿದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ಕೊಟ್ಟು ಅವರಿಗೆ ಬೆಂಬಲವನ್ನು ನೀಡುತ್ತಿರುವುದಾಗಿ ಅವರು ಹೇಳಿದ್ದಾರೆಂದು ಎಂದು ಮೂಲಗಳು ತಿಳಿಸಿವೆ. ಕರ್ನಾಟಕದ ಅತೀ ದೊಡ್ಡ ಪಕ್ಷ ಎಂದು ಹೇಳುತ್ತಿದ್ದ ಬಿಜೆಪಿಗೆ ಈ ಮೂಲಕ ಭಾರೀ ಹೊಡೆತ ಬಿದ್ದಿದ್ದು, ಬಿಜೆಪಿ ಸರಕಾರ ರಚಿಸುವುದು ಬಹುತೇಕ ಅನುಮಾನವೇ ಎನ್ನಲಾಗಿದೆ.
Comments