ಬ್ರೇಕಿಂಗ್ ನ್ಯೂಸ್ : 'ಕಮಲ'ಕ್ಕೆ ಬಿಗ್ ಶಾಕ್ ಕೊಟ್ಟ 'ತೆನೆ' ಹೊತ್ತ ಮುಖಂಡರು
ಈ ಬಾರಿ ವಿಧಾನಸಭಾ ಚುನಾವಣೆ ಭಾರೀ ಕುತೂಹಲ ಕೆರಳಿಸಿದ್ದು, ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದಕ್ಕೆ ಯಾವುದೇ ಪಕ್ಷಗಳಿಗೆ ಸರಿಯಾಗಿ ಬಹುಮತ ಬಾರದೇ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳು ಅನ್ಯ ಪಕ್ಷದ ಶಾಸಕರುಗಳನ್ನು ತಮ್ಮತ್ತ ಸೆಳೆಯವುದಕ್ಕೆ ಮುಂದಾಗಿದೆ.
ರಾಜ್ಯ ರಾಜಕಾರಣಕ್ಕೆ ಅತಂತ್ರ ಸ್ಥಿತಿ ಎದುರಾಗಿದೆ. ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿ ಬಹುಮತ ಸಾಬೀತು ಮಾಡಲು 15 ದಿನ ಕಾಲಾವಕಾಶ ನೀಡಿದ್ದಾರೆ. ಇನ್ನು ಈ ಹಿನ್ನೆಲೆಯಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿರುವ ಹೊತ್ತಲ್ಲೇ ಜೆಡಿಎಸ್ ಬಿಜೆಪಿ ಗೆ ಬಿಗ್ ಶಾಕ್ ಕೊಟ್ಟಿದೆ. ಅಷ್ಟಕ್ಕೂ ಕಮಲ ಪಾಳಯಕ್ಕೆ ಆದಂತಹ ಶಾಕ್ ಆದ್ರು ಏನು ಎಂಬ ನಿಮ್ಮ ಪ್ರಶ್ನೆಗೆ ಉತ್ತರವಿಲ್ಲಿದೆ. ಈಗಾಗಲೇ ಬಿಜೆಪಿ ಆಪರೇಷನ್ ಕಮಲ ಶುರುಮಾಡಿದ್ದು ಜೆಡಿಎಸ್ ನ ನಾಲ್ವರು ಶಾಸಕರಿಗೆ ಗಾಳ ಹಾಕಲು ಬಿಜೆಪಿ ಪ್ರಯತ್ನ ಪಟ್ಟಿತ್ತು. ಆದರೆ ಈ ಶಾಸಕರು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಡಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ. ಇನ್ನು ಬಿಜೆಪಿಯ ಈ ಸರ್ಕಸ್ ಮತ್ತಷ್ಟು ಕಗ್ಗಂಟಾದಂತಿದೆ ಎನ್ನಲಾಗಿದೆ.
Comments