ಸತತ ಐದು ಬಾರಿ ಸೋಲಿಗೆ ಜೆಡಿಎಸ್ ಪಕ್ಷದ ಮುಖಂಡರ ಗುಂಪುಗಾರಿಕೆ ಕಾರಣವಾ?



ಜೆಡಿಎಸ್ ಪಕ್ಷದ ಅಭ್ಯರ್ಥಿ ಮುನೇಗೌಡರು ತೀವ್ರ ಪೈಪೋಟಿ ನೀಡಿದರೂ ಅದು ಕೇವಲ ಸಾಸಲು ಹೋಬಳಿಗೆ ಮಾತ್ರ ಸೀಮಿತವಾಗಿ, ಬರೀ ಮುಖಂಡರಿಂದಲೇ ತುಂಬಿರುವ ಜೆಡಿಎಸ್ ಪಕ್ಷದಲ್ಲಿ ಒಗ್ಗೂಡಿ ಚುನಾವಣೆಯಲ್ಲಿ ಕೆಲಸ ಮಾಡದಿರುವುದು ಸೋಲಿಗೆ ಕಾರಣ, ಮುನೇಗೌಡರು ಸೋಲುವ ಮೂಲಕ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸತತ ಐದು ಬಾರಿ ಸೋಲಿನ ರುಚಿ ನೋಡಿದ್ದಾರೆ. 2004 ರಲ್ಲಿ ವಿ. ಕೃಷ್ಣಪ್ಪ, 2008 ರಲ್ಲಿ ಚಿ.ಚೆನ್ನಿಗಪ್ಪ, 2009 ರ ಉಪಚುನಾವಣೆಯಲ್ಲಿ ಬಿ.ಮುನೇಗೌಡ, 2013 ಸಿ.ಚೆನ್ನಿಗಪ್ಪ, 2018 ರಲ್ಲಿ ಮುನೇಗೌಡರು ಸೋತು ಇತಿಹಾಸ ಮರುಕಳಿಸಿದರು.
Comments