ಮತದಾರರನ್ನು ಓಲೈಸಲು ನೀಡುವ ಹೇಳಿಕೆಯ ಮೇಲೆ ಸ್ವಲ್ಪವಾದರೂ ನಿಯತ್ತು ಇಲ್ಲದಿದ್ದರೆ ಹೇಗೆ..!!!

17 May 2018 6:47 AM |
339 Report

ಬಿಜೆಪಿಯವರು ಎಲ್ಲೋ ಅಲ್ಲೊಲ್ಲೊಮ್ಮೆ ಜೆಡಿಎಸ್ ಅನ್ನು ದೂರಿದ್ದನ್ನು ಬಿಟ್ಟರೆ, ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಜಾಣತನದ್ದೆ? ಅದರಲ್ಲೂ, ಸಿದ್ದರಾಮಯ್ಯ ಮತ್ತು ಕುಮಾರಣ್ಣ ಎಂತೆಂತಾ ಮುತ್ತಿನಂತಹ ಮಾತುಗಳನ್ನು ವಿನಿಮಯಿಸಿಕೊಂಡಿದ್ದರು. ಪರಸ್ಪರ ಅಪ್ಪಂದಿರನ್ನು ಮಾತಿನಲ್ಲೇ ಹೊರಗೆಳೆದಿದ್ದರು. ಈಗ ಇಬ್ಬರೂ ಒಬ್ಬರೊನ್ನೊಬ್ಬರು ಅಪ್ಪಿಕೊಳ್ಳುತ್ತಿರುವುದನ್ನು ಪ್ರಜಾಪ್ರಭುತ್ವದ ಬ್ಯೂಟಿ ಎನ್ನಬೇಕೇ ಅಥವಾ 'ಛೀ' ಅನ್ನಬೇಕೇ? ಅದೇನೇ ಇರಲಿ.. ಇಬ್ಬರೂ ಸೇರಿ ಈಗ ಗದ್ದುಗೆ ನಿರ್ಮಿಸಲು ಹೊರಟಿದ್ದಾರೆ, ಅಗತ್ಯವಾದ ಸಂಖ್ಯಾಬಲವೂ ಇದೆ. ರಾಜ್ಯಪಾಲರನ್ನೂ ಜಂಟಿಯಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾಗಿದೆ, ಇನ್ನೇನಿದ್ದರೂ ಬಿಜೆಪಿಯ ಪ್ರತಿತಂತ್ರ, ರಾಜ್ಯಪಾಲರ ನಡೆ... ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳು. ಅವರಪ್ಪನ ಆಣೆಗೂ, ಅವನು (ಕುಮಾರಸ್ವಾಮಿ) ಮುಖ್ಯಮಂತ್ರಿ ಆಗಲ್ಲಾ, ಕನಸು ಕಾಣೋದನ್ನು ಅವನು ಬಿಡಲಿ ಎಂದು ಏಕವಚನದಲ್ಲಿ ಹರಿಹಾಯ್ದಿದಿದ್ದ ಹಂಗಾಮಿ ಸಿಎಂ ಸಿದ್ದರಾಮಯ್ಯನವರು, ಈಗ ಅದೇ ಕುಮಾರಣ್ಣನನ್ನು ಸಿಎಂ ಮಾಡಲು ರಾಜ್ಯಪಾಲರ ಬಳಿ ಹೋಗಬೇಕಾಗಿ ಬಂದಿರುವುದು ವಿಪರ್ಯಾಸ.

Courtesy: Balaraj Tantri.

Edited By

Ramesh

Reported By

Ramesh

Comments