ಕುಮಾರಸ್ವಾಮಿ ಯವರಿಗೊಂದು ಬಹಿರಂಗ ಪತ್ರ
ಸ್ವಾಮಿ ಕುಮಾರರೇ, ನೀವು ಹೆಸರಿಗಷ್ಟೇ ಕುಮಾರರೋ ಅಥವಾ ಪ್ರಬುದ್ಧರಾಗಿದ್ದೀರೋ ಗೊತ್ತಾಗುತ್ತಾ ಇಲ್ಲವಲ್ಲಾ? ಒಂದು ಹದಿನೈದು ಇಪ್ಪತ್ತು ದಿನ ಹಿಂದಕ್ಕೆ ಹೋಗಿ ತಮ್ಮ ವಿಕಾಸ ಪರ್ವ ಸಭೆಗಳಲ್ಲಿ, ಟಿವಿ ಮಾದ್ಯಮಗಳಲ್ಲಿ ಆಡಿದ, ಆಡುತ್ತಿದ್ದಂತಹ ಮಾತುಗಳನ್ನು ನೆನಪಿಸಿಕೊಳ್ಳಿ! ಬಹುಷಃ ಜಾಣ ಮರೆವು ಇರಬಹುದು, ಇರಲಿ ಬಿಡಿ ಹನ್ನೆರಡು ವರ್ಷಗಳ ಹಿಂದೆ ಜಿಜೆಪಿ ಜೊತೆ ಕೈಜೋಡಿಸಿ 20-20 ಮ್ಯಾಚ್ ಆಡಿ ಕೈಕೊಟ್ಟಿರೆಲ್ಲಾ? ಜ್ಞಾಪಕ ಇದೆಯಾ? ಆಗ ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಈಗ ಬಂದಿತ್ತು! ತೆಪ್ಪಗೆ ನಾವು ಬಿಜೆಪಿಗೆ ಬಾಹ್ಯ ಬೆಂಬಲ ನೀಡುತ್ತೇವೆ ಅವರೇ ಆಡಳಿತ ನಡೆಸಲಿ ಅಂತ ಅಂದುಬಿಟ್ಟಿದ್ದರೆ ತಾವು ಇಡೀ ಕರ್ನಾಟಕವೇ ಏನು ದೇಶದಾದ್ಯಂತ ಹೀರೋ ಆಗಿ ಬಿಡುತ್ತಿದ್ದೀರಿ, ಯಾಕೆ ದೇವೇಗೌಡರ ಭಯವೇ? ಬಿಡಿ, ಕಳೆದ ಐದು ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಪಿತಾಶ್ರೀಗಳನ್ನು, ತಮ್ಮನ್ನೂ ಯಾವರೀತಿ ಗೇಲಿ ಮಾಡುತ್ತಿದ್ದರೂ ಅಂತಾ ನಾದ್ರೂ ನೆನಪಿದಿಯಾ? ಆವಯ್ಯ ಕರೆದ ತಕ್ಷಣ ಎಲ್ಲಾ ಮರೆತು ಅಪ್ಪ ಮಗ ಬಂದಿರೆಲ್ಲಾ? ಚಾಮುಂಡೇಶ್ವರಿಯಲ್ಲಿರುವ ನಿಮ್ಮದೇ ಪಕ್ಷದ ಕಾರ್ಯಕರ್ತ ಮರಿಸ್ವಾಮಿಗಿರುವ ಸ್ವಾಭಿಮಾನವೂ ನಿಮ್ಮಿಬ್ಬರಿಗಿಲ್ಲವಾ? ಒಬ್ಬ ಸಾಮಾನ್ಯ ಕಾರ್ಯಕರ್ತನಿಗಿಂತಲೂ ಕಡೆಯಾಗಿ ಹೋದಿರಾ?
ಅದೇನೋ ಇಬ್ಬರೂ ಬಡಬಡಿಸುತ್ತೀರಲ್ಲಾ, ಕೋಮುವಾದ ಅಂತ ಏನು ಸ್ವಾಮಿ ಹಾಗಂದರೆ? ಯಾರು ಸ್ವಾಮಿ ಕೋಮುವಾದಿಗಳು? ಕೂತರೆ, ನಿಂತರೆ ಹೋಗಲಿ ಮಲಗಿದರೂ ವರ್ಷಪೂರ್ತಿ ಬರೀ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತೀರಲ್ಲಾ? ಯಾಕೆ ಬೇರೆಯವರು ನಿಮ್ಮ ಕಣ್ಣಿಗೆ ಕಾಣೋದಿಲ್ಲವಾ? ಮುಸ್ಲಿಮರನ್ನು ಓಲೈಸಿದರೆ ಅದು ಹೇಗೆ ತಾವು ಜಾತ್ಯಾತೀತರೋ ನಮಗಂತೂ ಗೊತ್ತಿಲ್ಲ, ನಾನು ಹಿಂದೂವಾಗಿ ಹುಟ್ಟಿದ್ದೇ ತಪ್ಪು, ಯಾವುದೇ ಕಾರಣಕ್ಕೂ ನಮ್ಮ ದೇಶವನ್ನು ಹಿಂದೂ ರಾಷ್ಟ್ರವಾಗಲು ಬಿಡಲ್ಲ, ಅಂತ ದೊಡ್ಡಗೌಡರು ಹೇಳುತ್ತಾರೆ, ಹೀಗಂದಾಗ ನಾವು ಹಿಂದೂಗಳು ಏನಂತ ತಿಳಿಯಬೇಕು? ಯಾರು ಕೋಮುವಾದಿಗಳು ಸ್ವಾಮಿ? ಅಲ್ಲಾ ಕುಮಾರಸ್ವಾಮಿಯವರೇ, ತಮ್ಮ ಪಕ್ಷದಿಂದ 2018ರ ಚುನಾವಣೆಗೆ ನಿಂತಿದ್ದ 1೦೦ ಮಂದಿ ಠೇವಣಿ ಕಳೆದುಕೊಂಡಿದ್ದಾರಂತೆ! ನಿಜವಾ? ನಿಮ್ಮ ಪಕ್ಷವನ್ನು ಬೆಂಬಲಿಸುವವರು ಒಂದೆರಡು ಜಿಲ್ಲೆಗಳ ಜನ ಅದು ಹೇಗೆ ಕರ್ನಾಟಕದ ಜನ ನಿಮ್ಮನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳುತ್ತಾರೆ? ಮೆಜಾರಟಿ ಬರದಿದ್ದರೆ ಸರ್ಕಾರ ರಚಿಸೋಲ್ಲಾ ಅಂದವರು ಯಾವ ಮುಖ ಇಟ್ಟುಕೊಂಡು ಸಿದ್ದರಾಮಯ್ಯ ಕರೆದ ಕೂಡಲೇ ಹತ್ತುಹನ್ನೆರಡು ವರ್ಷ ವಿರೋಧಿಸುತ್ತಾ ಬಂದಿದ್ದ ಕೈ ಪಕ್ಷದ ಜೊತೆ ಹೊರಟಿರಿ? ಮರಿಸ್ವಾಮಿಗೆ ಇರುವ ಸ್ವಾಭಿಮಾನವೂ ನಿಮ್ಮಲ್ಲಿಲ್ಲವೇ? ಕೇಳಲು ಬಹಳಷ್ಟು ಇದೆ ಇರಲಿ, ಮುಂದಿನ ದಿನಗಳಲ್ಲಿ ಈಗ ಇರುವಷ್ಟೂ ಸೀಟು ಬರೋಲ್ಲಾ ನನಗಂತೂ ಗ್ಯಾರಂಟಿ ಇದೆ, ನಿಮಗಿದೆಯೋ ಇಲ್ಲವೋ ಗೊತ್ತಿಲ್ಲ, ಅದನ್ನಾ ದೊಡ್ಡಗೌಡರೇ ಹೇಳಬೇಕು.
Comments