ಈ ಬಾರಿ ಮುಖ್ಯಮಂತ್ರಿ ಇವರೇ ಎಂದ ಎಚ್.ಡಿ.ರೇವಣ್ಣ
ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದಕ್ಕೆ ಯಾವುದೇ ಪಕ್ಷಗಳಿಗೆ ಸರಿಯಾಗಿ ಬಹುಮತ ಬಾರದೇ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳು ಅನ್ಯ ಪಕ್ಷದ ಶಾಸಕರುಗಳನ್ನು ತಮ್ಮತ್ತ ಸೆಳೆಯವುದಕ್ಕೆ ಮುಂದಾಗಿದೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದ ಕಡೆಗೆ ಎಲ್ಲರ ಚಿತ್ತ ಹರೆದಿದ್ದು, ಎಚ್.ಡಿ.ರೇವಣ್ಣ ಅವರು ದೇವರ ಪ್ರಸಾದ ಹಿಡಿದು ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ದಾಸರಹಳ್ಳಿ ಶಾಸಕ ಮಂಜುನಾಥ್, ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹಾಜರಿದ್ದರು.
ದೇವೇಗೌಡರು ಈಗಾಗಲೇ ಜೆಡಿಎಸ್ ಶಾಸಕರ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂದು ಶ್ರೀಕಂಠೇಗೌಡರಿಗೆ ನಿರ್ದೇಶನ ನೀಡಿದ್ದಾರೆ. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕೇಳಿಬಂದಿದೆ. ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಂಶೆಂಪುರ್ ಮತ್ತು ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಯಾವುದೇ ಹೈಜಾಕ್ ಆಗಲಿ ಏನೇ ಆಗಲಿ, ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ ಸರ್ಕಾರ ರಚನೆಯಾಗುತ್ತದೆ. ಅವರೇ ಸಿಎಂ ಆಗುವುದು ನಿಶ್ಚಿತ ಎಂದು ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ. ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಬಾರಿ ನಮ್ಮ ಪಕ್ಷದಿಂದ ಆಯ್ಕೆಯಾದ 38 ಶಾಸಕರು ಎಲ್ಲಿಯೂ ಹೋಗುವುದಿಲ್ಲ. ನಿಷ್ಠೆಯಿಂದ ಪಕ್ಷದ ಜೊತೆಗಿರುತ್ತಾರೆ. ಕುಮಾರಸ್ವಾಮಿ ಸಿಎಂ ಆಗೋದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Comments