ಬಿಜೆಪಿಗೆ ಬಹಿರಂಗ ಸವಾಲೆಸೆದ ಜೆಡಿಎಸ್ ದಳಪತಿ..!!
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ಜೆಡಿಎಸ್ ಶಾಸಕಾಂಗ ಸಭೆಯ ಬಳಿಕ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿ ಬಹುಮತಕ್ಕೆ ಇನ್ನೂ 9 ಶಾಸಕರ ಅಗತ್ಯವಿದೆ.
ಜಾತ್ಯತೀತ ಮತಗಳ ವಿಭಜನೆಯಿಂದ ಬಿಜೆಪಿಗೆ 104 ಸ್ಥಾನ ಬಂದಿದೆ. ಮೋದಿ ವರ್ಚಸ್ಸಿನಿಂದಾಗಿ 104 ಸ್ಥಾನ ಬಂದಿಲ್ಲ. ಜೆಡಿಎಸ್ ಮುಗಿಸಲು ಹೋಗಿದ್ದಕ್ಕೆ 104 ಸ್ಥಾನ ಸಿಕ್ಕಿದೆ. ಹೀಗಾಗಿ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವುದಾಗಿ ಹೇಳಿದರು. ನೀವು ಎಷ್ಟು ಶಾಸಕರನ್ನು ಕರೆದುಕೊಂಡು ಹೋಗುತ್ತೀರೋ, ನಾವು ಅದರ ಎರಡು ಪಟ್ಟು ಶಾಸಕರನ್ನು ಕರೆ ತರುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ಬಹಿರಂಗ ಸವಾಲು ಹಾಕಿದರು. ಬಿಜೆಪಿಗೆ 104 ಸ್ಥಾನವಷ್ಟೇ ಬಂದಿರೋದು, ಅವರಿಗೆ ಸರ್ಕಾರ ರಚಿಸಲು ಜನಾದೇಶ ಸಿಕ್ಕಿಲ್ಲ. ಒಂದು ವೇಳೆ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾದರೆ ನಾನೇನು ಸನ್ಯಾಸಿಯಲ್ಲ.ನಾವು ಕೂಡಾ ನಮ್ಮ ಶಾಸಕರನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
Comments