ಅತೀ ವಿನಯಂ ಧೂರ್ತ ಲಕ್ಷಣಂ!
ಸಿದ್ದರಾಮಯ್ಯ ಹೀಗೆ ನಿಂತಿರೋದು, ಕಳೆದ ಐದುವರ್ಷದಲ್ಲಿ ನನಗೆ ಅತೀವ ಸಂತೋಷ ಕೊಟ್ಟ ವಿಚಾರ. ನಯಾಪೈಸೆ ದೂರದೃಷ್ಟಿಯಿಲ್ಲದೇ ಆಡಳಿತ ನಡೆಸಿ, ಕೇವಲ ಭಾಗ್ಯಗಳ ಸರದಾರನಾಗಿ, ಜನರನ್ನ ಧರ್ಮ-ಮತಗಳ ಆಧಾರದ ಮೇಲೆ ಒಡೆದು ಏನೋ ಮಹಾನ್ ಸಾಧನೆ ಮಾಡಿದ್ದೀನಿ ಅನ್ನೋ ಹಾಗೆ ಬೀಗಿ, ಅಹಿಂದ ಅನ್ನೋದೊಂದು ಪದ ಬಿಟ್ಟು ಬೇರೇನೂ ಗೊತ್ತಿಲ್ಲದ, ಕಾನೂನು ಸುವ್ಯವಸ್ಥೆಗೆ ತಿಲಾಂಜಲಿ ಬಿಟ್ಟು, ತಾನೂ ರೌಡಿಯಂತೆ ವರ್ತಿಸಿ ಬೆಂಬಲಿಗರೂ ರೌಡಿಗಳಂತೆ ಆಡುವುದನ್ನು ನೋಡಿಕೊಂಡು ಸುಮ್ಮನಿದ್ದು, ಕೊನೆಗೆ ಹೆದರಿ ಎರಡು ಕಡೆಯಿಂದ ಸ್ಪರ್ಧಿಸಿ, ಅದರಲ್ಲೂ ಒಂದು ಕಡೆ ಸೋತು ಇನ್ನೊಂದು ಕಡೆ ಏದುಸಿರು ಬಿಟ್ಟು ಗೆದ್ದು, ಎಣಿಕೆ ಮುಗಿದು ಐದೇ ನಿಮಿಷಕ್ಕೆ ಚಡ್ಡಿ ಚಪ್ಲಿ ಎಲ್ಲಾ ಹರಿವಾಣದಲ್ಲಿಟ್ಟು “ಜೆಡಿಎಸ್ ಗೆ ಬೇಷರತ್ ಬೆಂಬಲ ಕೊಡ್ತೀವಿ” ಅನ್ನೋ ದೈನೇಸಿ ಸ್ಥಿತಿಗೆ ಬಂದು ನಿಂತ ಈ ಪರಮಪಾಪಿಗೂ........
Comments