ಬಹುಮತ ಪಡೆದ ಬಿಜೆಪಿ ಗೆ ಬಿಗ್ ಶಾಕ್ ಕೊಟ್ಟ ಶಾಸಕರು...!!
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ-103 ಸ್ಥಾನಗಳನ್ನು ಗಳಿಸುವ ಮೂಲಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್-78, ಜೆಡಿಎಸ್-38, ಬಿಎಸ್ಪಿ-1 ಹಾಗೂ ಪಕ್ಷೇತರರು- 2 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಮೈತ್ರಿ ಕಸರತ್ತು ರಾಜ್ಯದಲ್ಲಿ ಮುಂದುವರಿದಿದೆ.
ಇದೀಗ ರಾಜಕೀಯ ವಲಯದಲ್ಲಿ ರಾತ್ರೋ ರಾತ್ರಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸದಿಲ್ಲದೆ ಹೈದ್ರಾಬಾದ್ ರೆಸಾರ್ಟ್ ಗೆ ಹಲವು ಬಿಜೆಪಿ ಶಾಸಕರು ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. 20 ಬಿಜೆಪಿ ಶಾಸಕರ ಜೊತೆ ಅಶೋಕ್ ನೇತೃತ್ವದಲ್ಲಿ ಮಸಾಲಾ ಜಯರಾಂ, ಪ್ರೀತಮ್ ಗೌಡ ಜೆಡಿಎಸ್ ಸೇರ್ಪಡೆ ಬಗ್ಗೆ ಮಾತುಕತೆಯ ನಿರ್ಧಾರವನ್ನು ತಡರಾತ್ರಿ ಯಶಸ್ವಿಯಾಗಿದೆ ಎನ್ನಲಾಗಿದೆ. ಅಲ್ಲದೆ ಬಿಜೆಪಿಯ 10 ಶಾಸಕರು (5 ಒಕ್ಕಲಿಗ, 3 ಕುರುಬ, 2 ದಲಿತ) ಜೆಡಿಎಸ್ ಶಾಸಕ ರೇವಣ್ಣ ಹಾಗೂ ಡಿ.ಕೆ.ಶಿವಕುಮಾರ್ ಸಂಪರ್ಕದಲಿದ್ದಾರೆ ಎಂದು ತಿಳಿದು ಬಂದಿದೆ, 3 ಜನರಿಗೆ ಮಂತ್ರಿ ಆಫರ್ ಕೂಡ ಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Comments