ಸಿ.ಪಿ.ಯೋಗೇಶ್ವರ್‌ಗೆ ಮಣ್ಣು ಮುಕ್ಕಿಸಿದ ಜೆಡಿಎಸ್ ದಳಪತಿ ಎಚ್'ಡಿಕೆ...!!

ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ನಗೆಯ ಗೆಲವು ಬೀರಿದ್ದಾರೆ. ರಾಮನಗರದಲ್ಲಿ 92626 ಸಾವಿರ ಮತ, ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರದಲ್ಲಿ 87995 ಸಾವಿರ ಮತಗಳನ್ನು ಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಚನ್ನಪಟ್ಟಣದಿಂದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಸಿ.ಪಿ.ಯೋಗೇಶ್ವರ್ ಹ್ಯಾಟ್ರಿಕ್ ಗೆಲವು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಕುಮಾರಸ್ವಾಮಿ ವಿರುದ್ಧ ಫಲಿತಾಂಶಕ್ಕೂ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದ ಯೋಗೇಶ್ವರ್ ಗೆ, ಜನರು ತಕ್ಕ ಪಾಠ ಕಳಿಸಿದ್ದಾರೆ ಯಾವ ಪಕ್ಷದಿಂದಲೇ ಸ್ಪರ್ಧಿಸಿದರೂ ಗೆಲವು ಗ್ಯಾರಂಟಿ ಎಂದು ಬೀಗುತ್ತಿದ್ದ ಯೋಗೇಶ್ವರ್‌ಗೆ ಮುಖಭಂಗವಾಗಿದ್ದು, ಜನರು ಸೋಲಿಸುವ ಮೂಲಕ ರಾಜಕಾರಣಿಗೆ ಪಕ್ಷ ನಿಷ್ಠೆಯೂ ಮುಖ್ಯ ಎಂಬುದನ್ನು ಕಲಿಸಿಕೊಟ್ಟಿದ್ದಾರೆ. ಜೆಡಿಎಸ್ ದಳಪತಿ ಎಚ್.ಡಿ.ಕುಮಾರಸ್ವಾಮಿ 87995 ಸಾವಿರ ಮತಗಳಿಂದ ಭರ್ಜರಿ ಗೆಲುವು ಸಾಧಿಸಿ ಯೋಗೇಶ್ವರ್‌ಗೆ ಮಣ್ಣು ಮುಕ್ಕಿಸಿದ್ದಾರೆ .
Comments