ಬಂಡಾಯ ಅಭ್ಯರ್ಥಿಗೆ ಸೋಲುಣಿಸಿದ ದೊಡ್ಡಗೌಡ್ರು... !!



ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ಭಾರೀ ಕುತೂಹಲ ಕೆರಳಿಸಿದ್ದು, ಫಲಿತಾಂಶವು ಬಹುತೇಕ ಪ್ರಕಟಗೊಂಡಿದೆ. ಜಿಲ್ಲೆಯಲ್ಲಿ ಜೆಡಿಎಸ್ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಅಚ್ಚರಿಯ ರೀತಿಯಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವಿನ ಸನಿಹದಲ್ಲಿದ್ದಾರೆ.
ನಾಗಮಂಗಲ ಜೆಡಿಎಸ್ ಅಭ್ಯರ್ಥಿಯಾದ ಸುರೇಶ್‌ಗೌಡ ಬಂಡಾಯ ಶಾಸಕನಾದ ಎನ್. ಚಲುವರಾಯಸ್ವಾಮಿ ವಿರುದ್ದ ಬಹುಮತಗಳಿಂದ ಜಯವನ್ನು ಸಾಧಿಸಿದ್ದಾರೆ. ಈ ಬಾರಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಗೆದ್ದೆ ಗೆಲ್ಲುತ್ತೇನೆ ಎಂದು ಬೀಗುತ್ತಿದ್ದ ಬಂಡಾಯ ಅಭ್ಯರ್ಥಿಯಾದ ಎನ್. ಚಲುವರಾಯಸ್ವಾಮಿ ಗೆ ಸರಿಯಾಗಿಯೇ ನೀರುಣಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸುರೇಶ್‌ಗೌಡ 112396 ಸಾವಿರ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
Comments