'ಕಮಲ'ವನ್ನು ಕಮರಿಸಲು ಮುಂದಾದ 'ಕೈ' ಮತ್ತು 'ತೆನೆ'
ರಾಜ್ಯ ವಿದಾನಸಭೆಯ ಫಲಿತಾಂಶವು ಬಹುತೇಕ ಪ್ರಕಟಗೊಂಡಿದ್ದು ಯಾವ ಪಕ್ಷಕ್ಕೂ ಬಹುಮತ ಬಾರದೆ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂಬುದು ಈಗಾಗಲೆ ತಿಳಿದಿದೆ.
ಕೈ ಪಕ್ಷ 77 ಸ್ಥಾನ ಪಡೆದರೆ ಜೆಡಿಎಸ್ 39ರಲ್ಲಿ ಜಯಗಳಿಸಿದೆ. ಬಿಎಸ್'ಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದರೆ ಪಕ್ಷೇತರ ಅಭ್ಯರ್ಥಿಯೊಬ್ಬರು ಜಯಗಳಿಸಿದ್ದಾರೆ. ಸರ್ಕಾರವನ್ನು ರಚಿಸಲು ಮ್ಯಾಜಿಕ್ ನಂಬರ್ 112 ಬಾರದ ಕಾರಣ ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಕಾಂಗ್ರೆಸ್ ಯೋಜನೆಯನ್ನು ರೂಪಿಸಿದ್ದು ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನದ ಆಮಿಷವನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.
Comments