ಜಿದ್ದಾಜಿದ್ದಿ ಹೋರಾಟದಲ್ಲಿ ಗೆಲುವಿನ ನಗೆ ಬೀರಿದ ವೆಂಕಟರಮಣಯ್ಯ






ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರ ಬಿದ್ದಿದೆ, ಕಾಂಗ್ರೆಸ್ ಪಕ್ಷದ ಟಿ.ವೆಂಕಟರಮಣಯ್ಯ ಅಂತಿಮವಾಗಿ ಗೆಲುವಿನ ನಗೆ ಬೀರಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಕ್ಷೇತ್ರದಲ್ಲಿ ವೆಂಕಟರಮಣಯ್ಯ ಗೆದ್ದು ಮುಂದಿನ ಅಭಿವೃದ್ಧಿಯ ಹರಿಕಾರ ನಾನೇ ಎಂದು ಬೀಗಿದ್ದಾರೆ. ಜೆಡಿಎಸ್ ಪಕ್ಷದ ಮುನೇಗೌಡರು ಕೊನೆಯ ಕ್ಷಣದವರೆಗೂ ಪೈಪೋಟಿ ನೀಡಿ ಕೊನೆಯ ಸುತ್ತುಗಳಲ್ಲಿ ಗೆಲುವನ್ನು ವೆಂಕಟರಮಣಯ್ಯನವರಿಗೆ ಬಿಟ್ಟುಕೊಟ್ಟರು. ವೆಂಕಟರಮಣಯ್ಯ73,225 ಮತಗಳನ್ನು ಗಳಿಸಿ ಗೆದ್ದರೆ, ಎದುರಾಳಿ ಮುನೇಗೌಡರು 63,280ಮತಗಳನ್ನು ಗಳಿಸಿ 9,945 ಮತಗಳ ಅಂತರದಿಂದ ಸೋತಿದ್ದಾರೆ. ಬಿಜೆಪಿಯ ನರಸಿಂಹಸ್ವಾಮಿ 27,612ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
Comments