ಅನುಕಂಪದ ಅಲೆಯಲ್ಲಿ ಗೆಲ್ಲುವರಾ ಮುನೇಗೌಡರು?
ದಿನಾಂಕ 12ರ ಶನಿವಾರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಂದಿನ ಐದು ವರ್ಷಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕಿನ ದಣಿ ಯಾರಾಗುವರು? ಎಂಬ ಕುತೋಹಲಕ್ಕೆ ನಾಳೆ ತೆರೆ ಬೀಳಲಿದೆ, 12ರ ದಿನಕ್ಕೆ ಮುಂಚೆ ಇದ್ದ ಕುತೋಹಲಕ್ಕೆ ಬಿಜೆಪಿ ಅಭ್ಯರ್ಥಿ ನರಸಿಂಹಸ್ವಾಮಿ ಕೊಡಗಟ್ಟಲೆ ತಣ್ಣೀರು ಸುರಿದು ಚುನಾವಣಾಕಾವನ್ನು ಆರಿಸಿಬಿಟ್ಟಿದ್ದಾರೆ, ಉಳಿದಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಲ್ಲಿ ಯಾರಿಗೆ ವಿಜಯಲಕ್ಷ್ಮಿ ಒಲಿಯುವಳು ಎಂಬುದು ಬರೀ ಪ್ರಶ್ನೆಯಾಗಷ್ಟೇ ಉಳಿದುಕೊಂಡಿದೆ, ಎರಡು ಬಾರಿ ಸೋತಿರುವ ಅನುಕಂಪ ಜೆಡಿಎಸ್ ಪಕ್ಷದ ಮುನೇಗೌಡರ ಮೇಲಿದ್ದರೆ, ಎರಡನೇ ಬಾರಿಯೂ ಕಪ್ ನಂದೆ ಎನ್ನುತ್ತಿರುವ ಕಾಂಗ್ರೆಸ್ನ ವೆಂಕಟರಮಣಯ್ಯ, ಆದರೆ ತನ್ನ ಗುಟ್ಟನ್ನು ಬಿಟ್ಟುಕೊಡದ ತಾಲ್ಲೂಕಿನ ಮತದಾರ ಆರಾಮಾಗಿದ್ದಾನೆ.
Comments