ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಸಿ.ಪಿ.ಯೋಗೇಶ್ವರ್

ಕಳೆದ ಶನಿವಾರ ತಾನೆ ರಾಜ್ಯ ವಿಧಾನ ಸಭಾ ಚುನಾವಣೆಗೆ ತೆರೆ ಬಿದ್ದಿದೆ. ಯಾರಾಗ್ತಾರೆ ಮುಂದಿನ ಸಿ.ಎಂ ಎಂಬ ಗೊಂದಲಕ್ಕೆ ನಾಳೆ ತೆರೆ ಬೀಳಲಿದೆ. ಆದರೆ ಇನ್ನೂ ಫಲಿತಾಂಶವೆ ಬಂದಿಲ್ಲ ಆಗಲೇ ಚನ್ನಪಟ್ಟದ ಬಿಜೆಪಿ ಅಭ್ಯರ್ಥಿ ಪರೋಕ್ಷವಾಗಿ ಸೋಲನ್ನು ಒಪ್ಪಿಕೊಂಡಿದ್ದಾರೆ.
ಚನ್ನಪಟ್ಟದ ಬಿಜೆಪಿ ಅಭ್ಯರ್ಥಿಯಾದ ಸಿ.ಪಿ.ಯೋಗೇಶ್ವರ್ ಒಂದು ಸಾವಿರ ಮತಗಳಿಂದ ಗೆಲ್ಲಬಹುದು ಅಥವಾ ಸೋಲಬಹುದು ಎಂಬ ಹೇಳಿಕೆಯನ್ನು ನೀಡಿದ್ದಾರೆ.. ತ್ರಿಕೋನ ಸ್ಪರ್ಧೆಯಲ್ಲಿ ಯಾರೆ ಗೆದ್ದರೂ ಕೇವಲ ಒಂದು ಅಥವಾ ಎರಡು ಸಾವಿರ ಮತಗಳಿಂದ ಅಷ್ಟೆ ಗೆಲ್ಲಬಹುದು ಎಂದು ನಿನ್ನೆ ಸಂಜೆ ತಮ್ಮ ಬೆಂಬಲಿಗರೊಂದಿಗೆ ಈ ವಿಷಯದ ಬಗ್ಗೆ ಮಾತುಕತೆಯನ್ನು ಕೂಡ ನಡೆಸಿದ್ದಾರೆ ನನ್ನ ಸೋಲಿಗೆ ಎಚ್.ಎಂ.ರೇವಣ್ಣ ನೆ ಕಾರಣ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ನನಗೆ ನೇರವಾದ ಎದುರಾಳಿ ಎಂದರೆ ಅದು ಎಚ್.ಡಿ.ಕುಮಾರಸ್ವಾಮಿ ಎಂದು ಕೂಡ ತಿಳಿಸಿದ್ದಾರೆ. ಒಟ್ಟಾರೆ ಈ ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಯವರ ವರ್ಚಸ್ಸು ರಾರಾಜಿಸುತ್ತಿರುವುದ್ದರಿಂದ ಜೆಡಿಎಸ್ ಕ್ಷೇತ್ರವನ್ನು ವಶಕ್ಕೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ
Comments