ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯದ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ರೆಬೆಲ್ ಸ್ಟಾರ್ ಅಂಬಿ...!!
ತಮ್ಮ ಹುಟ್ಟೂರು ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಮತ ಚಲಾಯಿಸಿದ ಮಾಜಿ ಸಚಿವ ಅಂಬರೀಷ್ ಸುದ್ದಿಗಾರದೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲೂ ಸೋಲುತ್ತಾರೆ ಎಂಬ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ ಅಂಬರೀಶ್ ಅವರು ಗಮನಸೆಳೆದಿದ್ದು, ಅವರ ಈ ಅಚ್ಚರಿಯ ಹೇಳಿಕೆ ಕಾಂಗ್ರೆಸ್ ತೊರೆದು ಮುಂದಿನ ದಿನಗಳಲ್ಲಿ ಜೆಡಿಎಸ್ ಸೇರುವುದು ಖಚಿತ ಎಂಬುದು ಖಾತರಿಯಾಗಿದೆ.
ತಮ್ಮ ಹುಟ್ಟೂರು ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಮತ ಚಲಾಯಿಸಿದ ನಂತರ ಶಾಸಕ ಡಿ.ಸಿ. ತಮ್ಮಣ್ಣ ಅವರ ಪುತ್ರ ಸಂತೋಷ್ ಅವರ ಮನೆಗೆ ತೆರಳಿದ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದು, ಅದರಲ್ಲೂ ಮದ್ದೂರು ಕ್ಷೇತ್ರ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಜೆಡಿಎಸ್ ಪಾಲಾಗಿದೆ ಎಂದು ಹೇಳಿದರು. ನನ್ನ ಹೆಂಡತಿ ಮಕ್ಕಳನ್ನು ರಾಜಕೀಯವಾಗಿ ನಿಲ್ಲಿಸಿ ಬೆಳೆಸುವ ಅಗತ್ಯ ನನಗಿಲ್ಲ, ಅವರನ್ನು ಬೇರೆ ಕ್ಷೇತ್ರದಲ್ಲೇ ಬೆಳೆಸುತ್ತೇನೆ. ನಾನು ನನ್ನ ಜನರನ್ನು ಬೆಳೆಸುತ್ತೇನೆ ಎಂದು ಹೇಳಿದರು.
Comments