ಮತ್ತೊಮ್ಮೆ ವೆಂಕಟರಮಣಯ್ಯ? ಗೆಲುವನ್ನು ಚಿನ್ನದ ತಟ್ಟೆಯಲ್ಲಿಟ್ಟು ಕೊಟ್ಟ ನರಸಿಂಹಸ್ವಾಮಿ !
ದೊಡ್ಡಬಳ್ಳಾಪುರದಲ್ಲಿ ನೀರಸ ಮತದಾನ, ಉತ್ಸಾಹ ಕಳೆದುಕೊಂಡ ಬಿಜೆಪಿ ಕಾರ್ಯಕರ್ತರು, ದಲಿತರು ಮತ್ತು ಅಲ್ಪಸಂಖ್ಯಾತರು ಇರುವ ಕಡೆ ಬಿರುಸಿನ ಮತದಾನ, ಮತದಾನ ಮಾಡಲು ಪ್ರೇರೇಪಿಸುವಲ್ಲಿ ಯಶಸ್ವಿಯಾದ ಪಿಂಕ್ ಮತಗಟ್ಟೆಗಳು, ನೇಯ್ಗೆ ಬೀದಿ ಶಾಲೆ, ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿರುವ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ, ಇವಿಷ್ಟು ನಗರದ ಪರಿಸ್ಥಿತಿ. ಬಿಜೆಪಿ ಅಭ್ಯರ್ಥಿ ನರಸಿಂಹಸ್ವಾಮಿ ಮೇಲಿನ ಕೋಪವನ್ನು ಜೆಡಿಎಸ್ ಗೆ ಮತ ನೀಡುವ ಮೂಲಕ ತೀರಿಸಿಕೋಂಡ ಗ್ರಾಮಾಂತರ ಮತದಾರರು. ಕೊನೆಯ ಕ್ಷಣದಲ್ಲಿ ರಣಾಂಗಣದಲ್ಲಿ ಕೈಚೆಲ್ಲಿದ ನರಸಿಂಹಸ್ವಾಮಿಯವರಿಗೆ ಏನಾಯಿತು ಯಾರೂ ಹೇಳರು, ಎಲ್ಲರ ಮುಖದಲ್ಲೂ ಬೇಸರ,ನೋವು, ತಮ್ಮ ಕೋಪವನ್ನು ಯಾರನ್ನು ಬೈಯುವ ಮೂಲಕ ತೀರಿಸಿ ಕೊಳ್ಳುವುದು, ತಿಳಿಯದು? ಸಿಟ್ಟನ್ನು ತಮ್ಮೊಳಗೆ ನುಂಗಿ ವಿಷಕಂಠರಾಗಿರುವ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು.
Comments